ಭುವನೇಶ್ವರ, ಅ.28: ಅಂತರ್ಜಾತಿಯ ವಿವಾಹವಾಗುವುದು ಅನೇಕ ಕಡೆಗಳಲ್ಲಿನ ಸಮಾಜವು ಅಪರಾಧವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಒಡಿಶಾ ಸರ್ಕಾರವು ಈ ಪದ್ಧತಿಯನ್ನು ಗೌರವಿಸಿ, ಅಂತರ್ಜಾತಿಯ ಮದುವೆಯಾದವರಿಗೆ ಸಿಹಿಸುದ್ದಿಯನ್ನು ನೀಡಿದೆ. ಪ್ರೋತ್ಸಾಹ ಧನವನ್ನು ಒಂದು ಲಕ್ಷ ರೂಪಾಯಿಯಿಂದ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಿರುವುದು ಅನೇಕರಿಗೆ ಸಂತಸವನ್ನು ತಂದಿದೆ.
ಈ ಕುರಿತು ರಾಜ್ಯ ಎಸ್ಟಿ, ಎಸ್ಸಿ ಡೆವಲಪ್ಮೆಂಟ್, ಮೈನಾರಿಟೀಸ್ ಆಂಡ್ ಬ್ಯಾಕ್ವರ್ಡ್ ಕ್ಲಾಸಸ್ ವೆಲ್ಫೇರ್ ಡಿಪಾರ್ಟ್ಮೆಂಟ್ ಸುಮಂಗಲ ಎಂಬ ಹೆಸರಿನ ಈ ಪೋರ್ಟಲ್ ಒಂದನ್ನು ಅಭಿವೃದ್ಧಿ ಪಡಿಸಿದೆ. ದಂಪತಿ ಅರ್ಜಿ ಸಲ್ಲಿಸಿದ 60 ದಿನದೊಳಗೆ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಮೇಲ್ವರ್ಗದ ಹಿಂದುಗಳು ಪರಿಶಿಷ್ಟ ಜಾತಿಯವರನ್ನ ವಿವಾಹವಾಗಿರಬೇಕು, ಈ ವಿವಾಹವು 1955ರ ಹಿಂದು ವಿವಾಹ ಕಾನೂನಿನ ಪ್ರಕಾರ ಮಾನ್ಯತೆ ಹೊಂದಿರಬೇಕು. ಪತಿ ಅಥವಾ ಪತ್ನಿ ಯಾರಾದರೊಬ್ಬರು ಸಂವಿಧಾನದ ಅನುಚ್ಛೇದ 341ರ ಪ್ರಕಾರ ವ್ಯಾಖ್ಯಾನಿಸಿರುವ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು ಇಂತಹವರಿಗೆ ಈ ನಿಧಿಗೆ ಅರ್ಹರಾಗಿರುತ್ತಾರೆ.
ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಅಂತರ್ಜಾತಿಯ ವಿವಾಹಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಫಲಾನುಭವಿಗಳು, ಏಕ ಕಂತಿನ ಈ ಪ್ರೋತ್ಸಾಹ ಧನ ಪಡೆಯಬಹುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.