ಮನಾಲಿ: ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 3 ರಂದು ಅತ್ಯಂತ ಉದ್ದದ ಅಟಲ್ ಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಅಟಲ್ ಸುರಂಗಮಾರ್ಗ ಉದ್ಘಾಟನೆ ಮಾಡಿದಂದಿನಿಂದಲೂ ಪ್ರವಾಸಿಗರು ಅನುಚಿತ ವರ್ತನೆ ತೋರುತ್ತಿದ್ದು, ವೇಗದ ಚಾಲನೆ ಟ್ರಾಪಿಕ್ ನಿಯಮಗಳ ಉಲ್ಲಂಘನೆ, ಹೀಗೆ ಹತ್ತಾರು ಪ್ರಕರಣಗಳು ವರದಿಯಾಗುತ್ತಿದೆ.
ಕಳೆದ 72 ಗಂಟೆಗಳಲ್ಲಿ ಮೂರು ಅಫಘಾತಗಳು ನಡೆದಿದ್ದು ಆತಂಕವಾಗಿದೆ. ವಾಹನ ಚಲಿಸುತ್ತಿರುವಾಗ ಅನೇಕರ ಸೆಲ್ಫಿ ಕ್ಲಿಕ್ಕಿಸುವ ಹುಚ್ಚಿನಿಂದಾಗಿ ಅಪಾಯಗಳನ್ನು ತಾವೇ ಆಹ್ವಾನಿಸುತ್ತಿದ್ದಾರೆ, ಎಂಬುದಾಗಿ ಗಡಿರಸ್ತೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸುರಂಗ ಮಾರ್ಗದಲ್ಲಿ ವೇಗದ ಮಿತಿಯನ್ನು ಗರಿಷ್ಟ 80 ಕಿ.ಮೀ ಎಂದು ನಿಗದಿಪಡಿಸಲಾಗಿದೆ.