ಶಿವಮೊಗ್ಗ, ನ. 13: ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ ಕಂಡಿದ್ದು, ಎಲ್ಲಾ ರೀತಿಯ ಅಡಕೆ ಧಾರಣೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏರಿಕೆ ಕಂಡಿರುವುದು ರೈತರಲ್ಲಿ ಸಂತಸ ತಂದಿದ್ದು, ಹೊಸ ಅಡಿಕೆ ಕ್ವಿಂಟಾಲ್‌ಗೆ 40,159 ರೂ., ಬೆಟ್ಟೆ ಕ್ವಿಂಟಾಲ್‌ಗೆ 41,499 ರೂ., ಸರಕು ಕ್ವಿಂಟಾಲ್ ಗೆ 74,996 ರೂಪಾಯಿ ದರ ಇದೆ. ಅದೇ ರೀತಿ ಅಡಿಕೆ ಕ್ವಿಂಟಾಲ್‌ಗೆ 39,599 ರೂ., ಗೊರಬಲು ಕ್ವಿಂಟಾಲ್‌ಗೆ 31,889 ರೂ. ರಾಶಿ ಕ್ವಿಂಟಾಲ್‌ಗೆ 39,599 ರೂ. ದರ ಇದೆ.
ಮಾರುಕಟ್ಟೆಯಲ್ಲಿ ಅಡಕೆಯ ಸುಗ್ಗಿಕಾಲ ಇದಾಗಿದ್ದು, ಉತ್ತಮ ದರ ಇರುವುದು ರೈತರಿಗೆ ಸಂತಸ ತಂದಿದೆ. ರಾಜ್ಯದಲ್ಲೇ ಅತಿ ಹೆಚ್ಚಿನ ಅಡಿಕೆ ಮಾರಾಟವಾಗುವ ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಧಿಕ ದರವಿದ್ದು, ಗುಣಮಟ್ಟದಲ್ಲಿ ಉತ್ತಮವಾಗಿರುವ ಮಲೆನಾಡಿನ ಅಡಿಕೆ ಸರಕು ಕ್ವಿಂಟಾಲ್‌ಗೆ 75 ಸಾವಿರ ರೂಪಾಯಿ ತಲುಪಿದ್ದು, ಹೊಸ ಅಡಿಕೆ, ಬೆಟ್ಟೆ ಅಡಿಕೆ ದರ 40 ಸಾವಿರ ರೂ. ಗಡಿ ದಾಟಿದೆ. ಧಾರಣೆ ಹೆಚ್ಚಿರುವುದರಿಂದ ಮಾರುಕಟ್ಟೆಗೆ ಇನ್ನೂ ಹೆಚ್ಚಿನ ಪ್ರಮಾಣದ ಅಡಕೆ ಬರಲಿದೆ. ಬೆಲೆ ಏರುಮುಖವಾಗಿಯೇ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.