vijaya times advertisements
Visit Channel

ಅತಿಯಾದ ಮಾಂಸಾಹಾರ ಸೇವನೆಯ ಮುನ್ನ ಇದನ್ನು ತಿಳಿದುಕೊಳ್ಳಿ..

meat-1

ನೀವು ನಿತ್ಯವೂ ಮಾಂಸಾಹಾರ ಸೇವನೆ ಮಾಡುವವರಾ..? ದಿನಕ್ಕೆ ಮೂರು ಹೊತ್ತೂ ಏನಾದರೊಂದು ನಾನ್ ವೆಜ್ ಡಿಶ್ ಬೇಕೇ ಬೇಕಾ..? ಮಾಂಸಹಾರದಿಂದ ಅಗಾಧ ಪ್ರಮಾಣದ ಪ್ರೋಟೀನ್ ಲಭ್ಯವಾಗುವ ಕಾರಣ ಇದರ ಸೇವನೆಯಲ್ಲಿ ಮಿತಿ ಇರುವುದು ಅವಶ್ಯ. ಆದರೆ ಮಾಂಸಾಹಾರದ ರುಚಿ ಒಮ್ಮೆ ಹತ್ತಿದರೆ ಇದನ್ನು ಹತ್ತಿಕ್ಕುವುದು ಕಷ್ಟ ಹಾಗೂ ಈಗಂತೂ ಸಿದ್ಧ ರೂಪದಲ್ಲಿ ಲಭ್ಯವಿರುವ ಅತ್ಯಂತ ಸುಂದರ ಮತ್ತು ಸ್ವಾದಿಷ್ಟವಾದ ಖಾದ್ಯಗಳನ್ನು ತಿನ್ನದೇ ಇರಲು ಸಾಧ್ಯವೇ ಇಲ್ಲ. ರುಚಿಗೆ ಮನಸೋತವರ ಸೊಂಟದ ಗಾತ್ರವೂ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಆದರೆ ಅತಿಯಾದ ಮಾಂಸಾಹಾರದ ಸೇವನೆಯಿಂದ ತೂಕದಲ್ಲಿ ಹೆಚ್ಚಳ, ಸ್ಥೂಲಕಾಯ ಆವರಿಸುವುದು ಮೊದಲಾದ ತೊಂದರೆಗಳ ಜೊತೆಗೇ ಅಚ್ಚರಿ ತರಿಸುವ ಇನ್ನೂ ಕೆಲವರು ಪರಿಣಾಮಗಳನ್ನೂ ಎದುರಿಸಬೇಕಾಗಿ ಬರಬಹುದು.

ಹಾಗಾಗಿ ಅತಿಯಾದ ಮಾಂಸಾಹಾರ ಸೇವನೆಯಿಂದ ಏನೆಲ್ಲಾ ತೊಂದರೆಗಳು ಎದುರಾಗಬಹುದು ಎಂದು ಮುಂಚಿತವಾಗಿ ತಿಳಿದುಕೊಂಡರೆ ಹೆಚ್ಚಿನ ಪ್ರಮಾಣದ ಸೇವನೆಗೆ ನಿಮ್ಮ ಮನವೇ ತಡೆಯೊಡ್ಡುತ್ತದೆ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ನಿರ್ಜಲೀಕರಣ: ಹೆಚ್ಚಿನ ಪ್ರೋಟೀನ್ ಆಹಾರದಿಂದ ಮೂತ್ರಪಿಂಡಗಳು ಹೆಚ್ಚು ಸಾಂದ್ರತೆಯ ಮೂತ್ರವನ್ನು ಉತ್ಪತ್ತಿ ಮಾಡಲು ಕಾರಣವಾಗಬಹುದು ಮತ್ತು ಇದರಿಂದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ.

ದೇಹದ ದುರ್ಗಂಧ ಹಾಗೂ ಬಾಯಿಯ ದುರ್ವಾಸನೆ: ಕೆಮಿಕಲ್ ಸೆನ್ಸಸ್ ಎಂಬ ಮಾಧ್ಯಮದ ಪ್ರಕಾರ ಮಾಂಸಾಹಾರವನ್ನು ಸೇವಿಸಿದ ಜನರಲ್ಲಿ ದೇಹದ ದುರ್ಗಂಧವೂ ಹೆಚ್ಚು ಇರುತ್ತದೆ ಎಂದು ಪ್ರಕಟಿಸಲಾಗಿದೆ. ಸಾಕಷ್ಟು ಕಾರ್ಬೋಹೈಡ್ರೇಟ್‌ಗಳಿಲ್ಲದ ಪ್ರೋಟೀನ್ ಮತ್ತು ಕೊಬ್ಬಿನಂಶವುಳ್ಳ ಆಹಾರದ ಸೇವನೆಯಿಂದ ದೇಹದಲ್ಲಿ ಕೀಟೋನ್ ಗಳನ್ನು ಉತ್ಪಾದಿಸಲು ಕಾರಣವಾಗಬಹುದು. “ಕೀಟೋನ್ ಗಳು ಉಸಿರಾಟದ ಮೂಲಕ ಬಿಡುಗಡೆಯಾಗುತ್ತವೆ ಮತ್ತು ಅದು ಅಸಿಟೋನ್ ನಂತಹ ವಾಸನೆಯನ್ನು ಸೂಸುತ್ತವೆ”

ಮಲಬದ್ದತೆ ಹೆಚ್ಚಿನ ಮಾಂಸಾಹಾರ ಎಂದರೆ ಹೆಚ್ಚಿನ ಕಾರ್ಬೋಹೈಡ್ರೇಟುಗಳು, ಎಂದರೆ ಹೆಚ್ಚಿನ ಮಲಬದ್ದತೆ. ಏಕೆಂದರೆ ಮಾಂಸದಲ್ಲಿ ಕರಗದ ನಾರು ಇರುವುದೇ ಇಲ್ಲ, ಹಾಗಾಗಿ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸದೇ ಮಲಬದ್ದತೆ ಎದುರಾಗುತ್ತದೆ.

ತಲೆನೋವು ಸುಸ್ತು: ಮಾಂಸವು ಹೆಚ್ಚು ನಿರ್ಜಲೀಕರಣವಾಗಬಹುದು ಎಂದು ಪರಿಗಣಿಸಿದಾಗ ಇದು ತಲೆನೋವನ್ನೂ ಉಂಟುಮಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಅತಿ ಹೆಚ್ಚಿನ ಪ್ರೋಟೀನ್ ಅನ್ನು ಜೀರ್ಣಿಸಲು ನಮ್ಮ ಜೀರ್ಣವ್ಯವಸ್ಥೆಗೆ ಅತಿ ಹೆಚ್ಚಿನ ಶಕ್ತಿ ಮತ್ತು ಪೋಷಕಾಂಶಗಳ ಅಗತ್ಯವಿದ್ದು ದೇಹದಲ್ಲಿರುವ ಹೆಚ್ಚಿನ ಶಕ್ತಿಯನ್ನೆಲ್ಲಾ ಇದಕ್ಕಾಗಿಯೇ ವಿನಿಯೋಗಿಸಿಬಿಟ್ಟರೆ ಉಳಿದ ಕೆಲಸಗಳಿಗೆ ಶಕ್ತಿ ಸಾಲದೇ ಹೋಗುತ್ತದೆ. ಇದೇ ಸುಸ್ತು ಆವರಿಸಲು ಕಾರಣ.

ಕ್ಯಾನ್ಸರ್ , ದೃಷ್ಟಿ ಕುಂದುವ ಸಾಧ್ಯತೆ : ಕೆಂಪು ಮಾಂಸ ಆಧಾರಿತ ಪ್ರೋಟೀನ್‌ನಲ್ಲಿ ವಿಶೇಷವಾಗಿ ಅತಿಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್ ಇರುವ ಆಹಾರಗಳು ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಸಂಬಂಧಿಸಿವೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಕೆಂಪು ಮಾಂಸವನ್ನು ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ಜೀವಕೋಶಗಳ ಮರುಹುಟ್ಟುವಿಕೆಯ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತದೆ. ಅಂದರೆ ವೃದ್ದಾಪ್ಯದ ಲಕ್ಷಣಗಳು. ಇದು ಕಣ್ಣಿನ ಜೀವಕೋಶಗಳಿಗೂ ಅನ್ವಯಿಸುವ ಮೂಲಕ ಕಣ್ಣಿನ ಕ್ಷಮತೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

Latest News

ರಾಜ್ಯ

POCSO ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ದಂಡ ವಿಧಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ!

ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ರಾಜ್ಯ

ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ

ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ದೇಶ-ವಿದೇಶ

ಹೃದಯಾಘಾತದಿಂದ ಬಸ್ ಚಾಲಕ ಸಾವು ; ಅನ್ಯ ವಾಹನಗಳಿಗೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು!

ಬಸ್ ಚಾಲಕ ಹಠಾತ್ ಸಾವನ್ನಪ್ಪಿದ ಬೆನ್ನಲ್ಲೇ ಬಸ್ ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ದೃಶ್ಯದಲ್ಲಿ ಕಾಣಬಹುದು.

ಮನರಂಜನೆ

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು?

ತೆಲುಗು ಸಿನಿಮಾದ ಖ್ಯಾತ ಸಿನಿಮಾ ಪತ್ರಕರ್ತ,ಬರಹಗಾರ,ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ (Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.