
ಅನಂತ್‍ನಾಗ್ ಜಿಲ್ಲೆಯ ಖುಲ್ಚೊಹರ್ ಪ್ರದೇಶದಲ್ಲಿ ಇಂದು(ಸೋಮವಾರ) ಬೆಳಗಿನ ಜಾವ ಎನ್ ಕೌಂಟರ್‍ನಲ್ಲಿ ಮೂವರು ಉಗ್ರರ ಹತ್ಯೆ ಮಾಡಲಾಗಿದೆ. ಜೂ.26 ರಂದು ಟ್ರಾಲ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿಯೂ ಮೂವರು ಉಗ್ರರರನ್ನು ಪೊಲೀಸರು ಹತ್ಯೆ ಮಾಡಿದ್ದರು.
ಖುಲ್ಚೊಹರ್‍ನಲ್ಲಿ ನಡೆದ ಎನ್ ಕೌಂಟರ್‍ನಲ್ಲಿ ಹತ್ಯೆಯಾಗಿರುವ ಉಗ್ರರ ಗುರುತುಗಳನ್ನು ಪತ್ತೆಹಚ್ಚಲಾಗುತ್ತಿದ್ದು. ಶೋಧಕಾರ್ಯ ಮುಂದುವರೆದಿದೆ ಎಂದು ಕಾಶ್ಮೀರವಲಯ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಸಾಯಂಕಾಲ ಅನಂತ್ ನಾಗ್ ಜಿಲ್ಲೆಯ ಚೆವಾ ಉಲ್ಲಾರ್ ಗ್ರಾಮದಲ್ಲಿ ಉಗ್ರರ ಇರುವಿಕೆ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರಿಂದ ಮಾಹಿತಿ ಪಡೆದ ಭದ್ರತಾ ಪಡೆ ಪೊಲೀಸರು ಶೋಧ ನಡೆಸಿ ಖಚಿತ ಮಾಹಿತಿ ಮೇರೆಗೆ ಎನ್ ಕೌಂಟರ್ ಮಾಡಿ ಉಗ್ರರರ ಹತ್ಯೆ ಮಾಡಿದ್ದಾರೆ.