ಅನುಚಿತ ವರ್ತನೆ ತೋರಿದ ಕಾಮುಕನಿಗೆ ಯುವತಿಯೊಬ್ಬಳು ಬಸ್ಸಿನಲ್ಲೇ ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದಿಂದ ಪಾಂಡವಪುರಕ್ಕೆ ಹೊರಡಬೇಕಿದ್ದ ಬಸ್‌ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಯುವತಿಯೊಂದಿಗೆ ಕಾಮುಕ ಯುವಕನೊಬ್ಬ ಕುಳಿತಿದ್ದಾನೆ. ಈ ವೇಳೆ ಯುವತಿಯ ಮೈ, ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುವ ಯತ್ನ ಮಾಡಿದ್ದಾನೆ. ಆದರೆ ಇಷ್ಟಕ್ಕೆ ನಿಲ್ಲದ ಕಾಮುಕ ವರ್ತನೆ ಅತಿಯಾಗುತ್ತಿದ್ದಂತೆ ರೊಚ್ಚಿಗೆದ್ದ ಯುವತಿ, ಬಸ್ಸಿನಲ್ಲೇ ಯುವಕನನ್ನು ಹಿಡಿದು ಮನಬಂದಂತೆ ಗೂಸಾ ಕೊಟ್ಟಿದ್ದಾಳೆ.ಯುವತಿಯಿಂದ ಏಟು ತಿಂದ ಕಾಮುಕ ಕೂಡಲೇ ಬಸ್ಸಿಳಿದು ಓಡಿ ಹೋಗಿದ್ದಾನೆ ಎನ್ನಲಾಗಿದೆ.
ಕೊರೊನಾ ಕಾರಣದಿಂದ ಈತನನ್ನು ಹಿಡಿಯಲು ಸಾರ್ವಜನಿಕರು ಹಿಂದೇಟು ಹಾಕಿದ್ದಾರೆ. ಯುವತಿ ಕಾಮುಕನಿಗೆ ಥಳಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ಕುರಿತಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ರಾಜಕೀಯ
ನಿತೀಶ್ ಕುಮಾರ್ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ
ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.