Visit Channel

ಅಪಘಾತ: ರಾತ್ರಿ ಗಸ್ತಿನಲ್ಲಿದ್ದ ಎಎಸ್‍ಐ ಹಾಗೂ ಮುಖ್ಯ ಪೇದೆ ಸಾವು

WhatsApp Image 2020-11-12 at 3.04.03 PM

ಕೆ.ಆರ್‌.ನಗರ, ನ. 12: ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್‌ ಜೀಪ್‌ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಸಿದ್ದನಕೊಪ್ಪಲು ಗೇಟ್‌ ಬಳಿ ನಡೆದಿದೆ.

ಕೆ.ಆರ್.ನಗರ ಪೊಲೀಸ್‌ ಠಾಣೆಯ ಎಎಸ್‌ಐ ಮೂರ್ತಿ ಹಾಗೂ ಹೆಡ್‌ಕಾನ್‌ಸ್ಟೇಬಲ್‌ ಶಾಂತಕುಮಾರ್‌ ಅಪಘಾತದಲ್ಲಿ ಮೃತಪಟ್ಟವರು.

ಇಲಾಖೆ ಜೀಪಿನಲ್ಲಿ ರಾತ್ರಿ ಸರ್ಕಲ್ ನೈಟ್ ರೌಂಡ್ ಕರ್ತವ್ಯ ನಿರ್ವಹಿಸಿಕೊಂಡು ಸಾಲಿಗ್ರಾಮ ಪೊಲೀಸ್ ಠಾಣೆಯ ಕಡೆಯಿಂದ ಕೆ.ಆರ್.ನಗರದ ಕಡೆಗೆ ಬರುತ್ತಿರುವಾಗ ಬೆಳ್ಳಗಿನ ಜಾವ 3 ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಶವಗಳನ್ನು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಶವಗಾರ ಮತ್ತು ಘಟನಾ ಸ್ಥಳಕ್ಕೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಸೌತ್ DYSP ಸುಮಿತ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.