ಅಫ್ಘಾನ್‌ನ ಮಾಜಿ ಸಚಿವ ಈಗ ಪಿಜ್ಜಾ ಡೆಲವರಿ ಬಾಯ್

ಲೀಪ್‌ಜಿಗ್ ಆ 25 : ತಾಲಿಬಾನಿಗಳು ಈಗಾಗಲೇ ಅಫ್ಘಾನಿಸ್ತಾನಿವನ್ನು ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ತಾಲಿಬಾನ್ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಸಾಕಷ್ಟುಜನ ಅಫ್ಘಾನಿಸ್ತಾನವನ್ನು ತೊರೆದು ತಮ್ಮ ಜೀವನೋಪಾಯಕ್ಕಾಗಿ ಹಲವು ಉದ್ಯೋಗಗಳನ್ನು ಹುಡುಕಿಕೊಂಡಿದ್ದಾರೆ. ಸಾಮಾನ್ಯ  ಜನರು ಕೂಡ ಅಲ್ಲದೆ ಅಫ್ಘಾನ್‌ನ ಮಾಜಿ ಸಚಿವ ಸಾದತ್  ಇದೀಗ ಜರ್ಮನಿಯಲ್ಲಿ ಪಿಜ್ಜಾ ಡಿಲವರಿಯಾಗಿ ಕೆಲಸ ಮಾಡಿತ್ತಿರುವ ವಿಡಿಯೋ ಈಗ ವ್ಯಾಪಕ ವೈರಲ್ ಆಗಿದೆ. ಸಾದತ್ ಅವರು 2018ರಲ್ಲಿ ಅಫ್ಘಾನ್ ಸರ್ಕಾರದಲ್ಲಿ ಸಂವಹನ ಸಚಿವರಾಗಿದ್ದರು. ತಾಲಿಬಾನ್ ಸ್ವಾಧೀನಕ್ಕೂ ಮುಂಚೆಯೇ 2020ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಶ್ರಫ್ ಘನಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ದೇಶವನ್ನು ತೊರೆದು ಜರ್ಮಿನಿಯಲ್ಲಿ ನೆಲೆಸಿದರು. ಬಳಿಕ ಹಣದ ಕೊರತೆಯಿಂದಾಗಿ ಜೀವನೋಪಾಯಕ್ಕಾಗಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡಬೇಕಾಯಿತು.

ಈ ಬಗ್ಗೆ ಇನ್ಟಾಗ್ರಾಂನಲ್ಲಿ ಬರೆದಿರುವ ಸಾದತ್ ನಾನು ಜರ್ಮನಿಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ. ಲೀಪ್​ಜಿಗ್​ನಲ್ಲಿ ನನ್ನ ಕುಟುಂಬದೊಂದಿಗೆ ಇರುವುದು ನನಗೆ ಸಂತೋಷ ತಂದಿದೆ. ಜೀವನಕ್ಕಾಗಿ ಹಣವನ್ನು ಉಳಿಸುವುದಕ್ಕಾಗಿ ಬೇರೆ ಬೇರೆ ಕೆಲಸಕ್ಕೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

Latest News

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!