ನವದೆಹಲಿ, ಆಗಸ್ಟ್ 28: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಪ್ರಧಾನಿ ವಾಜಪೇಯಿ ಅವರು ವಾಸವಿದ್ದ ಬಂಗಲೆಗೆ ವಾಸ್ತವ್ಯ ಬದಲಿಸಿದ್ದಾರೆ. ಕೇಂದ್ರದಲ್ಲಿ ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಮಿತ್ ಶಾ ಅವರಿಗೆ ಅಟಲ್ ಬಿಹಾರಿ ವಾಜಪೇಯಿ ಇದ್ದ ಬಂಗಲೆಯನ್ನು ನೀಡಲಾಗಿದೆ.
ಕೃಷ್ಣ ಮೆನನ್ ಮಾರ್ಗದಲ್ಲಿನ ಬಂಗಲೆಯಲ್ಲಿ ವಾಜಪೇಯಿ ಅವರು ಹದಿನಾಲ್ಕು ವರ್ಷಗಳ ಕಾಲ ವಾಸವಿದ್ದರು. ಅವರು ನಿಧನರಾದ ನಂತರ ಆ ಬಂಗಲೆ ಖಾಲಿ ಉಳಿದಿತ್ತು. ಇದಕ್ಕೂ ಮುನ್ನ ಅಮಿತ್ ಶಾ ಅವರು ಅಕ್ಬರ್ ರಸ್ತೆಯಲ್ಲಿ ಇದ್ದರು.
2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸೋತ ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಈ ಕಟ್ಟಡದಲ್ಲಿ ವಾಸವಿದ್ದರು. ಕಟ್ಟಡದ ಸಂಖ್ಯೆ 8 ಎಂದು ಇದ್ದಿದ್ದು ಆ ನಂತರ 6A ಎಂದು ಬದಲಾವಣೆ ಆಗಿತ್ತು. ಇದೀಗ ಆ ಬಂಗಲೆಯಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಿದ್ದಾರೆ