ಚೀನಾಕ್ಕೆ ಅಮೆರಿಕಾ ಬಿಗ್ ಶಾಕ್ ನೀಡಲಿದೆ. ಭಾರತ ಚೀನಾದ ಆಯಪ್‍ಗಳನ್ನು ನಿಷೇಧಿಸಿದ ಬೆನ್ನಲ್ಲೇ ಅಮೆರಿಕ ಕೂಡ ಈ ನಿರ್ಧಾರ ಮಾಡುವ ಚಿಂತನೆಯಲ್ಲಿದೆ. ಟಿಕ್ ಟಾಕ್ ಸೇರಿ ಇನ್ನು ಅನೇಕ ಆಯಪ್ಗಳನ್ನು ನಿಷೇಧ ಮಾಡಲು ಅಮೆರಿಕ ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪಾಂಪಿಯೋ, ಟಿಕ್ ಟಾಕ್ ಸೇರಿ ಚೀನಾದ ಎಲ್ಲ ಆಯಪ್‍ಗಳನ್ನು ನಿಷೇಧಿಸಲು ಚಿಂತನೆ ನಡೆಸಿರುವ ವಿಷಯವನ್ನು ಖಾಸಗಿ ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಮೆರಿಕ ಕೂಡ ಭಾರತದ ಹಾದಿಯಲ್ಲಿ ಸಾಗುವ ನಿರ್ಧಾರವನ್ನು ಕೈಗೊಳ್ಳಲಿದೆ. ಈ ಮೂಲಕ ಭಾರತದ ನಂತರ ಅಮೆರಿಕ ಚೀನಾಕ್ಕೆ ಶಾಕ್ ನೀಡಲಿದೆ.