ವಾಷಿಂಗ್ಟನ್, ನ. 5: ವಿಶ್ವದ ಗಮನ ಸೆಳೆದಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕಾ ನಿವಾಸಿ, ಕರ್ನಾಟಕದ ಬೆಳಗಾವಿ ಮೂಲದ ಶ್ರೀಥಾಣೇದಾರ ಅವರು ಗೆಲುವು ಸಾಧಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಉದ್ಯಮಿ ಶ್ರೀಥಾಣೇದಾರ ಅವರು ಶೇ.93 ಮತಗಳನ್ನು ಪಡೆಯುವ ಮೂಲಕ ಮಿಷಿಗನ್ ಕ್ಷೇತ್ರದಿಂದ ಅಮೇರಿಕಾದ ಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಶ್ರೀಥಾಣೇದಾರ ಅವರು ಮುಂಬೈ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ 1979ರಲ್ಲಿ ಅಮೇರಿಕಾಕ್ಕೆ ತೆರಳಿದ ಅವರು ಅಕ್ರೋನ್ ವಿಶ್ವವಿದ್ಯಾಲಯ ಮತ್ತು ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದರು. ವಿಜ್ಞಾನಿ ಮತ್ತು ಉದ್ಯಮಿಯಾಗಿರುವ ಶ್ರೀಥಾಣೇದಾರ ಅವರು ಎರಡು ವರ್ಷಗಳ ಹಿಂದೆ ರಾಜ್ಯಪಾಲರ ಹುದ್ದೆಗೆ ಸ್ಪರ್ಧಿಸಿದ್ದರು ಎಂದು ತಿಳಿದು ಬಂದಿದೆ.