ಕೊರೋನಾ ಹಿನ್ನಲೆ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸಕರ್ಾರ ವಂದೇ ಭಾರತ್ ಮಿಷನ್ ಯೋಜನೆ ಈಗಾಗಲೇ ಆರಂಭಿಸಿದೆ.ಇದರ ಜೊತೆ ಸಮುದ್ರ ಸೇತು ಹೆಸರಿನಲ್ಲಿ 12 ದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು 64 ವಿಶೇಷ ವಿಮಾನಗಳು ಹಾಗೂ 11 ಹಡುಗುಗಳ ಮೂಲಕ ಸ್ವದೇಶಕ್ಕೆ ವಾಪಾಸ್ ಕರೆತರಲಾಗಿದೆ. ಮೊದಲ ಹಂತದ ಕಾರ್ಯಚರಣೆ ಪೂರ್ಣಗೊಂಡಿದ್ದು 2ನೇ ಹಂತದ ಕಾರ್ಯಚರಣೆ ಮೇ 16ಕ್ಕೆ ಆರಂಭಗೊಂಡಿದೆ.
ಈ ಹಿನ್ನಲೆ ಇಂದು ಬೆಳಗ್ಗೆ 8.30ಕ್ಕೆ ಅಮೇರಿಕಾದಿಂದ ವಿಮಾನ ಬೆಂಗಳೂರಿಗೆ ಆಗಮಿಸಿದೆ.ಈ ವಿಮಾನದಲ್ಲಿ ಸುಮಾರು 225 ಪ್ರಯಾಣಿಕರಿದ್ದು ಸುರಕ್ಷಿತವಾಗಿ ಬಂದಿಳಿದಿದ್ದಾರೆ.ಅಂದಹಾಗೆ ಕಿಲ್ಲರ್ ವೈರಸ್ ಕೊರೋನಾಗೆ ಅಮೇರಿಕಾದ ಜನ ಹೆಚ್ಚು ಬಲಿಯಾಗಿದ್ದು ಭಾರತೀಯರು ಇದರಲ್ಲಿ ಸಿಲುಕಿಹಾಕಿಕೊಂಡಿದ್ದರು.. ಇದಕ್ಕಾಗಿ ಅಮೇರಿಕಾದಿಂದ ಮೂರು ವಿಮಾನಗಳನ್ನು ಬಿಡಲಾಗಿತ್ತು.
ಇನ್ನು ಮೊದಲ ಹಾಗೂ ಎರಡನೇ ಹಂತದ ವಂದೇ ಭಾರತ್ ಮಿಷನ್ ಯೋಜನೆಯಂತೆ ವೃದ್ದರು , ಗಭರ್ಿಣಿಯರು , ಆರೋಗ್ಯದ ಸಮಸ್ಯೆ ಇರುವವರು , ವಿದ್ಯಾಥರ್ಿಗಳು ವಲಸೆ ಕಾಮರ್ಿಕರು , ಯಾತ್ರಾಥರ್ಿಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು; ಆಯಾ ದೇಶಗಳಲ್ಲಿ ಉದ್ಯೋಗಿಯಾಗಿದ್ದವರಿಗೆ ಕೊನೆಯ ಆದ್ಯತೆ ನೀಡಿದ್ದಾರೆ.ಈ ಪೈಕಿ 14 ದೇಶಗಳಿಂದ 17 ವಿಮಾನಗಳು ಕನರ್ಾಟಕಕ್ಕೆ ಆಗಮಿಸಲಿದೆ.ಮಾತ್ರವಲ್ಲ 31 ದೇಶಗಳಿಂದ 141 ವಿಶೇಷ ವಿಮಾನಗಳ ಮೂಲಕ ಅನಿವಾಸಿ ಭಾರತೀಯರನ್ನು ಕರೆತರಲಾಗುತ್ತಿದೆ