vijaya times advertisements
Visit Channel

ಅಯೋಧ್ಯೆ ತೀರ್ಪಿನ ಬಗ್ಗೆ ಪ್ರಮೋದ್ ಮುತಾಲಿಕ್ ಹೇಳಿದ್ದೇನು..?

images

ಬೆಂಗಳೂರು,ನ.09:  ವರ್ಷಗಳ ಹೋರಾಟಕ್ಕೆ ಕೊನೆಗೂ ಫಲ ದಕ್ಕಿದೆ. ಅಯೋಧ್ಯೆಯ ತೀರ್ಪು ಇಂದು ಹೊರಬಿದ್ದಿದ್ದು, ದೇಶಾದ್ಯಂತ ಜನ ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. ಶ್ರೀರಾಮಸೇನೆಯ ಮುಖ್ಯಸ್ಥರಾಗಿರುವ ಪ್ರಮೋದ್ ಮುತಾಲಿಕ್ ಅಯೋಧ್ಯೆಯ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿದ್ದಾರೆ.

ಅಯೋಧ್ಯೆ ಹೋರಾಟ 500 ವರ್ಷಗಳದ್ದು. ರಾಮನ ಜನ್ಮ ಸ್ಥಾನದಲ್ಲಿ ಭವ್ಯ ದೇವಸ್ಥಾನ ಆಗಬೇಕು ಎನ್ನುವಂಥದ್ದು ಎಲ್ಲರ ಒತ್ತಾಸೆಯಾಗಿತ್ತು. ಇಂದು ಸುಪ್ರೀಂ ಕೋರ್ಟ್ ಕೊಟ್ಟಂತಹ ಸಾಂವಿಧಾನಿಕ ತೀರ್ಪು ಇದನ್ನೇ ಹೇಳುವಂತಿದೆ. ಇದನ್ನು ಶ್ರೀರಾಮಸೇನೆ ಸಂಪೂರ್ಣವಾಗಿ ಸ್ವಾಗತಿಸುತ್ತದೆ. ಒಟ್ಟಿನಲ್ಲಿ ಇವತ್ತು ರಾಮನಿಗೆ ಮುಕ್ತಿ ಸಿಕ್ಕಿದೆ. 500 ವರ್ಷಗಳ ಕಳಂಕ ಹೋರಾಟ, 76ಕ್ಕೂ ಹೆಚ್ಚು ಯುದ್ಧಗಳು,30 ಲಕ್ಷ ಜನರ ಬಲಿದಾನ ಹಾಗೂ ತ್ಯಾಗಕ್ಕೆ ಇಂದು ನ್ಯಾಯ ಸಿಕ್ಕಿದೆ. ಇದು ಭಾರತೀಯರಿಗೆ, ನೂರು ಕೋಟಿ ಹಿಂದುಗಳಿಗೆ ಅತ್ಯಂತ ಆನಂದದ ದಿನ, ದೀಪಾವಳಿಯ ದಿನ. ಐತಿಹಾಸಿಕವಾದ, ಶ್ರೇಷ್ಟವಾದ ದಿನ ಎಂಬುದಾಗಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

Latest News

ಮಾಹಿತಿ

ಕರ್ನಾಟಕ ಸರ್ಕಾರದಿಂದ ಪಡಿತರ ಚೀಟಿ ಅರ್ಜಿದಾರರಿಗೆ ಮಹತ್ವದ ಸೂಚನೆ

ಸರ್ಕಾರ ಹೊರಡಿಸಿರುವ ಈ ಆದೇಶದಲ್ಲಿ 2022 ರವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು(Ration card) ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ

ಡಿಜಿಟಲ್ ಜ್ಞಾನ

ಡಿಸೆಂಬರ್ 1 ರಿಂದ ಡಿಜಿಟಲ್ ರೂಪಾಯಿ ; ಈ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ ಓದಿ

 ಇನ್ನು ಪೈಲಟ್ ಯೋಜನೆಯಲ್ಲಿ ಭಾಗವಹಿಸುವ ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಒಳಗೊಂಡ ಕ್ಲೋಸ್ಡ್ ಯೂಸರ್ ಗ್ರೂಪ್(CUG) ಅನ್ನು ಮಾತ್ರ ಇದು ಒಳಗೊಂಡಿದೆ ಎಂದು ಆರ್‌ಬಿಐ ಹೇಳಿದೆ.

ರಾಜಕೀಯ

ಖರ್ಗೆ ಹೆಸರಿಗೆ ಮಾತ್ರ ಅಧ್ಯಕ್ಷ, ಪೆನ್ನಿನ ಟಾಪ್ ಓಪನ್ ಮಾಡಲೂ ಮೇಡಮ್ ಆಣತಿಗೆ ಕಾಯಬೇಕು : ಬಿಜೆಪಿ

ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್(Congress) ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು? ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

ದೇಶ-ವಿದೇಶ

ಕಸ್ಟಡಿಯಲ್ಲಿ ಸಾವು : ಪೊಲೀಸರಿಗೆ 20 ರೂ.ಲಕ್ಷ ದಂಡ ವಿಧಿಸಿ, ಪ್ರಕರಣವನ್ನು CBIಗೆ ನೀಡಿದ ಹೈಕೋರ್ಟ್!

ಮಧ್ಯಪ್ರದೇಶದ ಬೆಳಗಾದ ಗ್ರಾಮದ ನಿವಾಸಿ ಸುರೇಶ್ ರಾವತ್ ಅವರನ್ನು ಗ್ವಾಲಿಯರ್‌ನಲ್ಲಿ ಸ್ಥಳೀಯ ಪೊಲೀಸರು ಆಗಸ್ಟ್ 10, 2019 ರಂದು ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಿದ್ದಾರೆ.