ಮುಂಬೈ, ಅ. 15: ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ವಿಧಾನಸಭಾ ಪ್ರಕ್ರಿಯೆಗಳ ಪ್ರತಿಯನ್ನು ಸ್ಪೀಕರ್ ಅನುಮತಿ ಇಲ್ಲದೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವುದಕ್ಕಾಗಿ ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿ ಹಕ್ಕು ಚ್ಯುತಿ ಉಲ್ಲಂಘನೆ ನೋಟಿಸ್‌ನ್ನು ನೀಡಿದ್ದಾರೆ.
ಈ ನೋಟಿಸ್‌ನ್ನು ಅಕ್ಟೋಬರ್ 13 ರಂದು ನೀಡಲಾಗಿದ್ದು, ಅಕ್ಟೋಬರ್ 15ರೊಳಗೆ ಲಿಖಿತ ಸ್ಪಷ್ಟನೆ ನೀಡಬೇಕೆಂಬುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಹಕ್ಕು ಚ್ಯುತಿ ಉಲ್ಲಂಘನೆಗಾಗಿ ಈ ಹಿಂದಿನ ಎರಡು ದಿನಗಳ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸೆಪ್ಚೆಂಬರ್ 16ರಂದು ಅರ್ನಾಬ್ ಗೋಸ್ವಾಮಿ ಅವರಿಂದ ವಿಧಾನಸಭಾ ಕಾರ್ಯದರ್ಶಿ ಸ್ಪಷ್ಟನೆಯನ್ನು ಬಯಸಿದ್ದರು. ಅಕ್ಟೋಬರ್ 5 ರೊಳಗೆ ಇದಕ್ಕೆ ಪ್ರತಿಕ್ರಿಯಿಸುವಂತೆ ಗಡುವನ್ನು ಕೂಡ ನೀಡಲಾಗಿತ್ತು. ಆದರೆ, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಕ್ಟೋಬರ್ 20ರೊಳಗೆ ಪ್ರತಿಕ್ರಿಯೆ ನೀಡುವಂತೆ ಮರು ನೋಟಿಸ್ ನೀಡಲಾಗಿದೆ.
ಸ್ಪೀಕರ್ ಅನುಮತಿ ಇಲ್ಲದೆ ಬಳಸದ ವಿಧಾನಸಭೆ ಪ್ರಕ್ರಿಯೆಗಳ ಪ್ರತಿಯನ್ನು ಸಹ ಅರ್ನಾಬ್ ಗೋಸ್ವಾಮಿಗೆ ಕಳುಹಿಸಲಾಗಿತ್ತು. ಆದರೆ, ಈ ನೋಟಿಸ್ ವಿರುದ್ಧವಾಗಿ ಗೋಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದಾಗ, ವಿಧಾನಸಭೆ ಪ್ರಕ್ರಿಯೆಗಳ ಪ್ರತಿಯನ್ನು ಸಹ ಸಲ್ಲಿಸಿದ್ದು, ಹಕ್ಕು ಚ್ಯುತಿ ಉಲ್ಲಂಘನೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.