ಧಾರವಾಡ, ನ. 13: ಅಶುಕವಿಗಳ ಮೂಲಕವೇ ಚಿರಪರಿಚಿತರಾಗಿದ್ದ ಕವಿ ವಿ.ಸಿ. ಐರಸಿಂಗ (91) ಅವರು ಶುಕ್ರವಾರ ಮುಂಜಾನೆ ನಿಧನರಾದರು.
ಅನಾರೋಗ್ಯದ ಹಿನ್ನೆಲೆ ಅವರನ್ನು ಜರ್ಮನ್ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಐರಸಂಗ ಅವರು ನಿಧರಾಗಿದ್ದಾರೆ.
ಐರಸಿಂಗ ಅವರು ನೂರಾರು ಆಶುಕವಿತೆಗಳನ್ನು ಬರೆದು ಅವುಗಳನ್ನು ಪುಟ್ಟ ಪ್ಯಾಕೆಟ್ ಪುಸ್ತಕ ರೂಪದಲ್ಲಿ ಮುದ್ರಿಸಿ ತಮ್ಮ ಸೈಕಲ್ ಮೇಲಿಟ್ಟು ಮಾರಾಟ ಮಾಡುತ್ತಿದ್ದರು. ಧಾರವಾಡ ಆಕಾಶವಾಣಿ ಇವರ ಕವಿತೆಗೆಳನ್ನು ಆಗಾಗ ಪ್ರಸಾರ ಮಾಡುತ್ತಿತ್ತು. ಐರಸಂಗ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಕೂಡಾ ಮಲ್ಲಕಂಬಪಟುವಾಗಿದ್ದು, ನಿತ್ಯವೂ ಸೈಕಲ್ ಓಡಿಸುವುದು ಹಾಗೂ ಈಜು ಹವ್ಯಾಸವನ್ನು ಹೊಂದಿದ್ದರು. ಅಲ್ಲದೇ, ಇವರು ಅತ್ಯಂತ ಸರಳ ಜೀವಿಯಾಗಿದ್ದರು.
ಐರಸಿಂಗ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಐರಸಂಗ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.