ನವದೆಹಲಿ: ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆ 1989 ಕ್ಕೆ ತಿದ್ದುಪಡಿ ತಂದಿದ್ದು ಅ. 1 ರಿಂದ ಕಟ್ಟು ನಿಟ್ಟಿನ ಹೊಸ ನಿಯಮ ಜಾರಿಗೊಳಿಸಿದೆ. ಸವಾರರು ಇನ್ನು ಮುಂದೆ ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರ ದಾಖಲೆ ಪತ್ರಗಳನ್ನು ಕಡ್ಡಾಯವಾಗಿ ವಾಹನಗಳಲ್ಲಿಟ್ಟುಕೊಳ್ಳಬೇಕು.
ಅ. 1 ರಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್ ಹಾಗೂ ಏಕರೂಪದ ವಾಹನ ರಿಜಿಸ್ಟ್ರೇಶನ್ ನಿಯಮ ಜಾರಿಗೊಳ್ಳಲಿದೆ. ದಾಖಲೆಗಳ ಪ್ರತಿಗಳು ಇಲ್ಲವೇ ಡಿಜಿ ಲಾಕರ್ ಸೇರಿದಂತೆ ಅಧಿಕೃತ ಆಪ್ ಗಳ ಮೂಲಕ ದ್ರಢೀಕರಿಸಿದ ಪತ್ರಗಳನ್ನು ಇಟ್ಟುಕೊಳ್ಳಬೇಕು, ನಕಲಿ ದಾಖಲೆಗಳ ಹಾವಳಿಯನ್ನು ತಪ್ಪಿಸಲು ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಶನ್ ಕಾರ್ಡ್ ಗಳಲ್ಲಿ ಹೊಸ ಚಿಪ್ ಅಳವಡಿಸಿಕೊಳ್ಳಲಾಗುತ್ತದೆ.
ಪೊಲೀಸರು ಕ್ಯೂ ಆರ್ ಕೋಡ್ ಹಾಗೂ ಚಿಪ್ ಮೂಲಕ ವಾಹನದ ದಾಖಲೆ, ಸವಾರನ ದಾಖಲೆಗಳ ಪರಿಶೀಲನೆ ನಡೆಸಬಹುದು. ಇದರಲ್ಲಿ ವಿಶೇಷವೆಂದರೆ 10 ವರ್ಷಗಳ ದಾಖಲೆಗಳನ್ನು ಶೇಖರಣೆ ಮಾಡಿಕೊಳ್ಳಬಹುದು. ಇದರಿಂದ ವಾಹನ ಸವಾರರ ಟ್ರಾಫಿಕ್ ಉಲ್ಲಂಘನೆ, ವಿಮೆ ,ಸೇರಿದಂತೆ ಎಲ್ಲಾ ಮಾಹಿತಿ ಲಭ್ಯವಾಗಲಿದೆ.