ಕೊಚ್ಚಿ, ನ. 3: ಆಟೋ ಚಾಲಕ ಶ್ಯಾಮ್ ಕುಮಾರ್‌ಗೆ ಪ್ರತಿಷ್ಠಿತ ಪಿ.ವಿ. ಥಂಪಿ ಪ್ರಶಸ್ತಿ ಲಭಿಸಿದೆ. ಕೇರಳಾದ ಪಾಲಕ್ಕಾಡ್‌ನ ತೆಂಕುರಿಸಿಯ ಶ್ಯಾಮ್ ಕುಮಾರ್ ಅವರು ತೆಂಕುರಿಸಿ, ಪೆರುಂಬಾವುA ಹಾಗೂ ಕೊಡವಾಯೂರ್ ಗ್ರಾಮ ಪಂಚಾಯತ್‌ಗಳಲ್ಲಿ 25000 ಗಿಡಗಳನ್ನು ನೆಟ್ಟು ಅವುಗಳ ಆರೈಕೆ ಮಾಡುತ್ತಿದ್ದಾರೆ. ಈ ಕಾರ್ಯಕ್ಕಾಗಿ ಶ್ಯಾಮಕುಮಾರ್ ಅವರಿಗೆ ಖ್ಯಾತ ಪತ್ರಕರ್ತ ಹಾಗೂ ಬರಹಗಾರ ಪಿ.ವಿ ಥಂಪಿ ಅವರ ಸ್ಮರಣಾರ್ಥ ನೀಡೋ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
51 ವರ್ಷದ ಶ್ಯಾಮ್ ಕುಮಾರ್ ಕಳೆದ 20 ವರ್ಷಗಳಿಂದ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಇವರು ಕಹಿಬೇವು, ಆಲದ ಮರ, ನೇರಳೆ ಹೀಗೆ ನಾನಾ ಬಗೆಯ ಗಿಡಗಳನ್ನು ನೆಡುತ್ತಿದ್ದಾರೆ. ಇವರು ರಸ್ತೆ ಬದಿಯ ಮರಗಳಿಂದ ಬಿದ್ದಿರೋ ಬೀಜಗಳನ್ನು ಹೆಕ್ಕಿ ಸಂಗ್ರಹಿಸಿ ಅವುಗಳಿಂದ ಗಿಡಗಳನ್ನ ರೆಡಿ ಮಾಡಿ ನೆಡುತ್ತಿದ್ದಾರೆ. ಆ ಬಳಿಕ ಆ ಗಿಡಗಳಿಗೆ ಬೇಲಿ ಹಾಕಿ ಸಣ್ಣ ಕೋಲನ್ನ ಆಧಾರವಾಗಿಟ್ಟು ಅದಕ್ಕೆ ಒಂದು ಬಾಟಲಿ ಕಟ್ಟಿ ಚಿಕ್ಕ ಆ ಮೂಲಕ ನೀರುಣಿಸಿ ಗಿಡಗಳನ್ನ ಸಾಕುತ್ತಿದ್ದಾರೆ.