
ಪ್ರಸಕ್ತ ಶೈಕ್ಷಣಿಕ ಸಾಲಿನ ತರಗತಿಗಳು ಆನ್ ಲೈನ್ ನಲ್ಲಿ ನಡೆಯುವುದಾದರೆ ವಿದೇಶಗಳ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಇರುವಂತಿಲ್ಲ, ಇರಲು ಬಿಡುವುದಿಲ್ಲ ಎಂದು ಅಮೆರಿಕ ಹೇಳಿದೆ. ಕೋವಿಡ್-19 ವೈರಸ್ ಸಮಸ್ಯೆಯಿಂದ ಉಂಟಾಗಿರುವುದರಿಂದ ಅಮೆರಿಕ ಈ ನಿರ್ಧಾರ ಕೈಗೊಳ್ಳಲಿದೆ.
ವಲಸೆಯೇತರ ಎಫ್-1 ಮತ್ತು ಎಂ-1 ವಿದ್ಯಾರ್ಥಿಗಳು ಅಮೆರಿಕದಲ್ಲಿ ಇದ್ದುಕೊಂಡು ಸಂಪೂರ್ಣವಾಗಿ ಆನ್ ಲೈನ್ ಕೋರ್ಸ್‍ನಲ್ಲಿ ಮಾಡುವುದು ಸಾಧ್ಯವಿಲ್ಲ ತರಗತಿಗೆ ಹೋಗಬೇಕಾಗುತ್ತದೆ ಇಲ್ಲವೇ ಅವರು ತಮ್ಮ ದೇಗಳಿಗೆ ತೆರಳಬೇಕು ಎಂದು ಅಮೆರಿಕ ವಲಸೆ ಮತ್ತು ಸುಂಕ ನಿರ್ದೇಶನಾಲಯ ತಿಳಿಸಿದೆ.
ಸದ್ಯ ಆನ್ ಲೈನ್ ನಲ್ಲಿ ತರಗತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಕೋವಿಡ್-19 ನಿದಾಂಗಿ ದೇಶ ಬಿಟ್ಟು ಹೋಗಬೇಕು ಇಲ್ಲವೇ ಕಾನೂನು ಮಾಣ್ಯತೆಯಲ್ಲಿ ಬೇರೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ. ಜತೆಗೆ ಆನ್ ಲೈನ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು ನೀಡುವಂತೆ ವಿಶ್ವವಿದ್ಯಾನಿಲಯಗಳಿಗೆ ಸೂಚನೆ ನೀಡಲಾಗಿದೆ.
ಅಮೆರಿಕಾದ ಬಹುತೇಕ ವಿಶ್ವವಿದ್ಯಾನಿಲಯಗಳು , ಕಾಲೇಜುಗಳು ಈ ವರ್ಷದ ಸೆಮೆಸ್ಟರ್ ಯಾವ ರೀತಿ ನಡೆಯಲಿದೆ ಎಂದು ಇನ್ನೂ ತಮ್ಮ ಯೋಜನೆಗಳನ್ನು ತಿಳಿಸಿಲ್ಲ .