ಸಬ್ಬಕ್ಕಿಯನ್ನು(ಸಾಬುದಾನಿ) ಹೆಚ್ಚಾಗಿ ಪಾಯಸ ಮಾಡಲು ಉಪಯೋಗಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು,. ಆದರೆ ಇದರಿಂದ ಬೇರೆ ಬೇರೆ ಖಾದ್ಯಗಳನ್ನೂ ತಯಾರಿಸಬಹುದಾಗಿದೆ. ಇದು ದೇಹಕ್ಕೆ ತಂಪಾಗಿ ಸಹಕಾರಿಯಾಗುತ್ತದೆ. ಮಲಬದ್ದತೆಯಾದಲ್ಲಿ ಇದನ್ನು ನೀರು ಹಾಗೂ ಹಾಲಿನಲ್ಲಿ ಚೆನ್ನಾಗಿ ಬೇಯಿಸಿ ತೆಳುವಾಗಿ
ಕುಡಿಯುವಂತಿರಬೇಕು .ಇದಕ್ಕೆ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಬಳಿಕ ದೊಡ್ಡ ಗ್ಲಾಸಲ್ಲಿ ಹಾಕಿ ಕುಡಿಯಬೇಕು. ಇದು ಮಲಬದ್ದತೆ ನಿವಾರಣೆಗೆ ಒಳ್ಳೆಯದು.
ಇನ್ನೊಂದು ರೀತಿಯಲ್ಲೂ ಇದನ್ನು ಬಳಸಬಹುದು. ಸಬ್ಬಕ್ಕಿಯನ್ನು ಚೆನ್ನಾಗಿ ಬೇಯಿಸಿ ತಣ್ಣಗಾಗಲು ಬಿಡಿ, ನಂತರ ಹಾಲು ಏಲಕ್ಕಿ ಸ್ವಲ್ಪ ಒಣದ್ರಾಕ್ಷಿ ಹಾಗೂ ಬೆಲ್ಲ ಸೇರಿಸಿ ಮಿಕ್ಸಿ ಗೆ ಹಾಕಿ ಜ್ಯೂಸ್ ಮಾಡಿ ಕುಡಿಯಬಹುದು ,ಇದರಿಂದ ಹೊಟ್ಟೆ ತಂಪಾಗುವುದಲ್ಲದೆ ಮಲಬದ್ದತೆ ನಿವಾರಣೆಗೆ ಸಹಾಯಕವಾಗುವುದು. ಜಠರದಲ್ಲಿ ಏನೇ ತೊಂದರೆ ಇದ್ದರೂ ನಿವಾರಣೆ ಆಗುವುದು ಉಷ್ಣವಾಗಿದ್ದರೆ ತಂಪಾಗುವುದು.
ಇನ್ನು ಸಬ್ಬಕ್ಕಿಯನ್ನು ಬೇಯಿಸಿ ಅದರಿಂದ ಸಂಡಿಗೆಯನ್ನೂ ಮಾಡಿದರೆ ಊಟದ ಜೊತೆ ನಂಚಿಕೊಳ್ಳಲು ಚೆನ್ನಾಗಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುವುದು, ಇದನ್ನು ಉಪ್ಪಿಟ್ಟಿನಂತೆ ಮಾಡಿಯೂ
ಬಳಸಬಹುದು. ದೇವರ ವೃತ ಮಾಡುವವರು ಉಪ್ಪಿಟ್ಟು ಮಾಡಿಯೂ ತಿನ್ನುತ್ತಾರೆ ಕೈ ಕಾಲು ನಿಶ್ಯಕ್ತಿಗೆ , ದೇಹ ಸುಸ್ತಾಗಿದ್ದರೆ ಉತ್ತಮವಾದ ಶಕ್ತಿ ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದ್ದು ಹೃದಯದ ಆರೋಗ್ಯಕ್ಕೂ ಉತ್ತಮ. ಶರ್ಖರ ಪಿಷ್ಟ ಹಾಗೂ ಕ್ಯಾಲ್ಸಿಯಂ ಹೇರಳವಾಗಿದೆ ವಿಟಮಿನ್ ಸಿ ಇದರಲ್ಲಿ ಇರುವುದರಿಂದ ಮೆದುಳಿನ ಆರೋಗ್ಯಕ್ಕೂ ಉತ್ತಮವಾಗಿದೆ. ಇನ್ನು ಇದನ್ನು .ಪಕೋಡಾ ಹಾಗೂ ಇನ್ನೂ ಅನೇಕ ರೆಸಿಪಿಗಳಲ್ಲೂ ಬಳಸಬಹುದು.