ಬೆಂಗಳೂರು, ಅ. 29: ನವೆಂಬರ್ ೩ರಂದು ಆರ್. ಆರ್ ನಗರದಲ್ಲಿ ಉಪಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ಪ್ರಚಾರದ ಭರಾಟೆಯನ್ನು ಜೋರಾಗಿಯೇ ನಡೆಸುತ್ತಿವೆ. ಬಿಜೆಪಿ ಪಕ್ಷವು ಇದಕ್ಕೆ ಹೊರತಾಗಿಲ್ಲ. ನಿನ್ನೆಯಷ್ಟೇ ಮುನಿರತ್ನ ಪರ ಖುಷ್ಬೂ ಪ್ರಚಾರ ನಡೆಸಿದ್ದಾರೆ. ಇನ್ನು ಇಂದು ದರ್ಶನ್ ಪ್ರಚಾರ ನಡೆಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ನಾಳೆ ಪ್ರಚಾರ ನಡೆಸಲಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.
ನಾಳೆ ಬೆಳಿಗ್ಗೆ 9ಗಂಟೆಗೆ ಜ್ಞಾನಭಾರತಿ ವಾರ್ಡ್‌ನಿಂದ ಆರಂಭವಾಗುವ ದರ್ಶನ್ ಬಿರುಸಿನ ಪ್ರಚಾರವು ರಾತ್ರಿ 10 ಗಂಟೆವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ದರ್ಶನ್ ಪ್ರಚಾರಕ್ಕೆ ಎಲ್ಲಾ ರೀತಿಯ ಸಿದ್ದತೆ ನಡೆಯುತ್ತಿದ್ದು, ಆರ್. ಆರ್ ನಗರದ ಜನರು ದರ್ಶನ್ ಪ್ರಚಾರಕ್ಕೆ ಉತ್ಸುಕರಾಗಿದ್ದಾರೆ.
ನಟ ನಿರ್ಮಾಪಕ ಚಾಲೆಂಜಿಗ್ ಸ್ಟಾರ್ ದರ್ಶನ್ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ. ಕುರುಕ್ಷೇತ್ರ ಸಿನೆಮಾಕ್ಕೆ ಮುನಿರತ್ನ ಅವರೇ ನಿರ್ಮಾಪಕರಾಗಿದ್ದರು ಆದ್ದರಿಂದ ದರ್ಶನ್ ಅವರ ಜತೆಗೆ ಒಳ್ಳೆಯ ಸ್ನೇಹ ಬಾಂಧವ್ಯ ಬೆಳೆದಿತ್ತು ಈ ಕಾರಣದಿಂದಾಗಿ ನಾಳೆ ಮುನಿರತ್ನ ಪರ ಪ್ರಚಾರ ಮಾಡಲಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ದರ್ಶನ್ ಅವರು ಪ್ರಚಾರ ನಡೆಸಿದ್ದರು ಈ ಮೂಲಕ ಸುಮಲತಾ ಎಲ್ಲರ ಗಮನ ಸೆಳೆದಿದ್ದರು.
ನಿನ್ನೆ ಖುಷ್ಬೂ ಪ್ರಚಾರವನ್ನು ನಡೆಸಿದಾಗ ಜನರು ಸಾಮಾಜಿಕ ಅಂತರವನ್ನು ಮರೆತು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.