ಬೆಂಗಳೂರು, ನ. 3: ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಕಾದಾಟಕ್ಕೆ ವೇದಿಕೆಯಾಗಿರುವ ರಾಜರಾಜೇಶ್ವರಿನಗರ ಉಪ ಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದೆ.
ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ಕೂಡ ತಮ್ಮ ಹಕ್ಕು ಚಲಾಯಿಸಿದರು. ಆರ್.ಆರ್. ನಗರದ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಗೆ ಆಗಮಿಸಿದ ನಟ ದರ್ಶನ್, ಸಾಮಾನ್ಯ ಜನರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಈ ವೇಳೆ ನಟ ದರ್ಶನ್ ಅವರನ್ನು ಕಂಡು ಪುಳಕಿತರಾದ ಚುನಾವಣಾ ಸಿಬ್ಬಂದಿ, ಫೋಟೋಗಾಗಿ ಮಾಸ್ಕ್ ತೆಗೆಯುವಂತೆ ಮಾಡಿದ ಮನವಿಗೆ, ನಟ ದರ್ಶನ್ ನಕ್ಕು ಸುಮ್ಮನಾದರು.
ಇದಕ್ಕೂ ಮುನ್ನ ಇದೇ ಕ್ಷೇತ್ರ ವ್ಯಾಪ್ತಿಯ ನಿವಾಸಿಯಾಗಿರುವ ನಟ ನೆನಪಿರಲಿ ಪ್ರೇಮ್ ಪತ್ನಿ ಸಮೇತರಾಗಿ ಮತದಾನ ಮಾಡಿದರು.