ಇಂಟರ್‌ನೆಟ್‌ ಬಳಕೆದಾರರಿಗೆ ಗುಡ್‌ನ್ಯೂಸ್

ನವದೆಹಲಿ, ಅ. 27: ಪ್ರಸ್ತುತ ನಾವು ಜೀವಿಸುತ್ತಿರುವ ಯುಗ ಡಿಜಿಟಲ್‌ ಯುಗ. ಈ ಕಾಲದಲ್ಲಿ ನಮಗೆ ಎಲ್ಲಾ ಕಾರ್ಯಗಳಿಗೂ ಇಂಟರ್ನೆಟ್‌ನ ಅವಶ್ಯಕತೆ ತುಂಬಾ ಇದೆ. ಇಂಟರ್ನೆಟ್‌ ಇಲ್ಲದೇ ಯಾವುದೇ ಆಫೀಸ್‌ ಕೆಲಸಗಳು ಮುಂದುವರೆಯುವುದಿಲ್ಲ ಎಂದೇ ಹೇಳಬಹುದು. ಆದ್ದರಿಂದ ದೇಶಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂತಹ ಏರಿಕೆಗೆ ಅನುಗುಣವಾಗಿ ಡೇಟಾ ದರದಲ್ಲಿ ಕಡಿಮೆಗೊಳಿಸಬೇಕಿದ್ದಂತಹ ಒಂದೊಂದು ಮೊಬೈಲ್ ಸೇವಾ ಕಂಪನಿಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿವೆ ಎನ್ನುವುದು ಕೇಳಿಬರುತ್ತಿದೆ. ಹೀಗಾಗಿ ದೇಶದಲ್ಲಿ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎನ್ನುವುದು ದೂರಸಂಪರ್ಕ ಕಂಪನಿಗಳು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು(ಟ್ರಾಯ್) ಒತ್ತಾಯಿಸಿವೆ. ಆದ್ದರಿಂದ ಸದ್ಯದಲ್ಲಿಯೇ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಇಂಟರ್‌ನೆಟ್‌ ಬಳಕೆದಾರರಿಗೆ ಗುಡ್ ನ್ಯೂಸ್ ಕೂಡ ಸಿಗಲಿದೆ.

ಟ್ರಾಯ್ ನ ಹೊಸ ಅಧ್ಯಕ್ಷ ಪಿ.ಡಿ.ವಘೇಲಾ ಜೊತೆ ನಡೆಸಿದಂತ ಸಭೆಯಲ್ಲಿ ದೂರ ಸಂಪರ್ಕ ಕಂಪನಿಗಳು ಈ ಒತ್ತಾಯ ಮಾಡಿದ್ದಾವೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದ್ದು, ಡೇಟಾ ಸೇವೆಗಳ ಕನಿಷ್ಠ ಶುಲ್ಕವನ್ನು ಟ್ರಾಯ್ಡ್ ಮೂಲಕವೇ ನಿಗದಿ ಆಗಬೇಕು ಎಂಬುದು ದೂರ ಸಂಪರ್ಕ ಉದ್ಯಮದ ಆಗ್ರಹವಾಗಿದೆ. ಈ ವಿಚಾರವಾಗಿ ಸಮಾಲೋಚನೆಯ ಪ್ರಕ್ರಿಯೆಯನ್ನು ಬೇಗ ನಡೆಸಬೇಕು. ನಿಯಮಗಳನ್ನು ಜಾರಿಗೊಳಿಸಬೇಕು ಎಂಬುದು ಟ್ರಾಯ್ ಅನ್ನು ಮನವಿ ಮಾಡಿವೆ ಎಂಬುದಾಗಿ ತಿಳಿದು ಬಂದಿದೆ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.