ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರವಾಹಿ ಅಲ್ಪಾವಧಿಯಲ್ಲೇ ಎಲ್ಲರ ಗಮನಸೆಳೆದಿದೆ..ಅದ್ರಲ್ಲೂ ಸೀರಿಯಲ್ ಶೂಟಿಂಗ್ ಗೆ ಬಳಕೆ ಮಾಡಿದ ಬೃಹತ್ ಬಂಗಲೆಯಂತೂ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ..ಆದ್ರೆ ನಿಮ್ಗೆ ಗೊತ್ತಾ ಆ ಬೃಹತ್ ಬಂಗಲೆ ಯಾರದ್ದು ಅಂತ..? ಯಸ್..ಕನ್ನಡದ ಹೆಸರಾಂತ ಗಾಯಕ ದಿವಂಗತ ಎಲ್.ಎನ್.ಶಾಸ್ತ್ರಿಯವರದ್ದು. ಅನಾರೋಗ್ಯದಿಂದ ಶಾಸ್ತ್ರಿಯವರು ನಿಧನರಾದಾಗ ಮನೆ ಜವಾಬ್ದಾರಿ ನಿಭಾಯಿಸುವ ಸಲುವಾಗಿ ಈ ಅರಮನೆಯನ್ನೂ ಶೂಟಿಂಗ್ ಗೆ ನೀಡಿದವರು ಶಾಸ್ತ್ರಿಯವರ ಪತ್ನಿ ಸುಮಾರವರು.
ಈ ವೇಳೆ ಪಾರು ಧಾರವಾಹಿಯ ನಿರ್ಮಾಪರಾದ ದಿಲೀಪ್ ರಾಜ್ ರವರು ಈ ಮನೆಯನ್ನು ಮೆಚ್ಚಿಕೊಂಡು ಶೂಟಿಂಗ್ ಗೆ ಒಪ್ಪಿಕೊಂಡರು. ಅಲ್ಲದೆ ಸುಮಾರವರನ್ನು ಧಾರವಾಹಿಯಲ್ಲಿ ಅಭಿನಯಿಸಲು ಕೇಳಿಕೊಂಡರು..ಆದ್ರೆ ಹಿನ್ನಲೆ ಗಾಯಕಿಯಾಗಿದ್ದ ಸುಮಾರವರು ಅಭಿನಯಕ್ಕೆ ಮನಸ್ಸು ಮಾಡಿರಲಿಲ್ಲ..ಕಾಲೇಜು ಸ್ನೇಹಿತೆ ವಿನಯಾ ಪ್ರಸಾದ್ ರವರು ಈ ಧಾರವಾಹಿಯ ಮುಖ್ಯ ಪಾತ್ರಧಾರಿಯೆಂದು ತಿಳಿದ ನಂತರ ಅವರ ಒತ್ತಾಯಕ್ಕೆ ಮಣಿದು ಈ ಧಾರವಾಹಿಯಲ್ಲಿ ಅರಸನಕೋಟೆಯ ಕುಕ್ಕಿಂಗ್ ಹೆಡ್ ಆಗಿ ಬಣ್ಣ ಹಚ್ಚಿದ್ದಾರೆ ಸುಮಾ ಶಾಸ್ತ್ರಿ.
ಒಟ್ನಲ್ಲಿ ಧಾರವಾಹಿಗೆ ಉತ್ತಮ ಶೂಟಿಂಗ್ ಪ್ಲೇಸ್ ನೀಡುವುದರೊಂದಿಗೆ ಉತ್ತಮ ಪಾತ್ರವನ್ನೂ ನಿಭಾಯಿಸಿದ ಸುಮಾ ಶಾಸ್ತ್ರಿಯವರು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.