ಹೊಸದಿಲ್ಲಿ, ಅ. 31: ಏರ್ ಇಂಡಿಯಾ(ಎಐ) ಅಂಗಸಂಸ್ಥೆ ಅಲೈಯನ್ಸ್ ಏರ್ನ ಸಿಇಒ ಆಗಿ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ನೇಮಿಸಿದ್ದು, ಹರ್ಪ್ರೀತ್ ಸಿಂಗ್ ಅವರನ್ನು ಏರ್ ಇಂಡಿಯಾ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಈ ಬಗ್ಗೆ ಏರ್ ಇಂಡಿಯಾ ಸಿಎಂಡಿ ರಾಜೀವ್ ಬನ್ಸಾಲ್ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೆ ಸಿಂಗ್ ಅವರು, ಅಲೈಯನ್ಸ್ ಏರ್ ಸಿಇಒ ಹುದ್ದೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಹರ್ಪ್ರೀತ್ ಸಿಂಗ್ ಅವರು ಪ್ರಸ್ತುತ ಏರ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ವಿಮಾನ ಸುರಕ್ಷತೆ) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.