ಬೆಂಗಳೂರು,ನ.17: ರಾಜ್ಯದಲ್ಲಿ ರೈಲು ಪ್ರಯಾಣಿಕರಿಗೆ ಹೊಸ ಸುದ್ದಿ ನೀಡಿದೆ. ರೈಲು ಪ್ರಯಾಣಿಕರಿಗೆ ಇದೀಗ 4 ಹೆಚ್ಚುವರಿ ರೈಲುಗಳನ್ನು ಓಡಿಸಲು ಅನುಮತಿ ಸಿಕ್ಕಿದೆ. ಯಶವಂತಪುರದಿಂದ ಬೀದರ್ಗೆ ಹೋಗುವ ರೈಲು 06271 ಇವತ್ತಿನಿಂದ ವಾರದಲ್ಲಿ 4 ದಿನ ಓಡಾಡಲಿದ್ದು, ಸೋಮವಾರ, ಮಂಗಳವಾರ, ಗುರುವಾರ ಹಾಗೂ ಭಾನುವಾರ ಸಂಜೆ 7 ಗಂಟೆಗೆ ಯಶವಂತಪುರದಿಂದ ಹೊರಟು ಬೆಳಿಗ್ಗೆ 9.15ಕ್ಕೆ ಬೀದರನ್ನು ತಲುಪಲಿದೆ.
06272, ಸೋಮವಾರ ಮಂಗಳವಾರ, ಬುದವಾರ ಹಾಗೂ ಶುಕ್ರವಾರ ಸಂಜೆ 6.05ಕ್ಕೆ ಹೊರಟು ಮರುದಿನ ಬೆಳಿಗ್ಗೆ 7.40ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರ-ಬೀದರ್ ಯಶವಂತಪುರ-ಲಾತೂರ್ ನಡುವೆ ಹೆಚ್ಚುವರಿ ರೈಲುಗಳನ್ನು ಓಡಿಸಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.