ಮೇಷ:- ಹತ್ತಿರದವರಿಂದಲೇ ಅನಿರೀಕ್ಷಿತವಾದ ಚುಚ್ಚುಮಾತುಗಳನ್ನು ಕೇಳುವ ಸಾಧ್ಯತೆ ಇದೆ. ಅದಕ್ಕೆ ಪ್ರತಿಕ್ರಿಯಿಸದೇ ಇರುವುದು ಉತ್ತಮ. ಅವಮಾನ ಪ್ರಸಂಗಗಳನ್ನು ಎದುರಿಬೇಕಾಗುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.
ವೃಷಭ:- ಶುಭ ಮುಂಜಾನೆಯು ದಿನವಿಡಿ ಲವಲವಿಕೆಯಿಂದ ಇರುವಂತೆ ಮಾಡುವುದು. ಗುರು ಜನರು ನಿಮ್ಮ ವಿಚಾರ ಧಾರೆಗಳನ್ನು ಗೌರವಿಸುವರು. ಹಾಗಂತ ನಾಲಿಗೆಯನ್ನು ಹರಿಬಿಡಬೇಡಿ. ಇದರಿಂದ ನೀವು ತೊಂದರೆ ಎದುರಿಸಬೇಕಾಗುವುದು.
ಮಿಥುನ:– ಸದ್ಯದ ಗ್ರಹಸ್ಥಿತಿ ಉತ್ತಮವಾಗಿರದ ಕಾರಣ, ಮಡದಿ ಮಕ್ಕಳೇ ನಿಮ್ಮನ್ನು ಆದರಿಸದೆ ಹೋಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿ ಅಷ್ಟೇನು ಉತ್ತಮವಿರುವುದಿಲ್ಲ. ಹಾಗಾಗಿ ತಾಳ್ಮೆಯಿಂದ ಇರುವುದು ಒಳ್ಳೆಯದು.
ಕಟಕ:– ಮನೆ ಒಳಾಂಗಣ ವಿನ್ಯಾಸಕಾರರಿಗೆ ಹೇರಳ ಅವಕಾಶಗಳು ಬರಲಿವೆ. ಕೆಲವರಿಗೆ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಸಿಗುವುದು. ಸಂಗಾತಿಯೊಂದಿಗಿನ ಬಾಂಧವ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.
ಸಿಂಹ:– ಮರಕ್ಕಿಂತ ಮತ್ತೊಂದು ಮರ ದೊಡ್ಡದು ಎಂಬ ಜಾಗತಿಕ ಸತ್ಯವನ್ನು ಅರಿಯಿರಿ. ನೀವೇ ಬುದ್ಧಿವಂತರು ಎಂದು ಬೀಗದಿರಿ. ನಿಮಗಿಂತ ಹೆಚ್ಚಿನ ಬುದ್ಧಿವಂತರು ನಿಮ್ಮನ್ನು ಭೇಟಿ ಮಾಡಲಿದ್ದಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಕನ್ಯಾ:- ಬರೀ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿರುವ ನಿಮಗೆ ಯಾವುದೇ ಕೆಲಸವನ್ನು ಸಕಾಲಕ್ಕೆ ಮಾಡಲಾಗುತ್ತಿಲ್ಲಎಂಬ ಕೊರಗು ಕೂಡ ಕಾಡುತ್ತಿದೆ. ಆದಷ್ಟು ಭಗವಂತನ ಮೊರೆ ಹೋಗುವುದು ಒಳ್ಳೆಯದು.
ತುಲಾ:- ಸ್ಥಳ ಬದಲಾವಣೆಯ ಸಾಧ್ಯತೆ ಇದೆ ಅಥವಾ ಮಾಡುವ ವೃತ್ತಿಯಲ್ಲಿ ಪ್ರಗತಿ ಕಂಡು ಬರುವುದು. ಆದಷ್ಟು ಕೋಪಗೊಳ್ಳದೆ ಶಾಂತತೆ ಕಾಪಾಡಿಕೊಳ್ಳಿ. ವಿವಿಧ ಮೂಲಗಳಿಂದ ಹಣಕಾಸು ಬರುವುದು.
ವೃಶ್ಚಿಕ:- ಸರಿಯಾಗಿ ಸಾಗುತ್ತಿರುವ ಕಾರ್ಯ ವಿಧಾನಗಳಲ್ಲಿ ಬದಲಾವಣೆ ಬೇಡ. ಸದ್ಯದ ಪರಿಸ್ಥಿತಿ ಅಷ್ಟೇನೂ ಉತ್ತಮವಿಲ್ಲ. ಕುಲದೇವರನ್ನು ಸ್ಮರಿಸಿ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಎಳ್ಳುದೀಪ ಹಚ್ಚಿ.
ಧನುಸ್ಸು: ವೃಥಾ ನಿಂದನೆಗಳನ್ನು ಎದುರಿಸಬೇಕಾಗಿ ಬರಬಹುದು. ನಿಮ್ಮನ್ನು ನೀವೇ ವಿಮರ್ಶಿಸಿಕೊಳ್ಳಿ. ದಶರಥ ಕೃತ ಶನಿಯ ಸ್ತೋತ್ರ ಪಠಿಸಿ. ಪ್ರಯಾಣ ಕಾಲದಲ್ಲಿಉದ್ದಿನಕಾಳನ್ನು ಇಟ್ಟುಕೊಂಡು ಹೋಗಿ.
ಮಕರ:- ಕಚೇರಿಯ ಕೆಲಸ ಕಾರ್ಯಗಳಲ್ಲಿಅಚ್ಚುಕಟ್ಟುತನ ತೋರುವ ನಿಮಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ಕಚೇರಿಯಲ್ಲಿಆಗದವರು ನಿಮ್ಮನ್ನು ಕೆಣಕುವ ಸಾಧ್ಯತೆ ಇದೆ. ಅವರೆಲ್ಲರನ್ನು ಚಾಣಾಕ್ಷತನದಿಂದ ದೂರ ಮಾಡಿಕೊಳ್ಳಿ.
ಕುಂಭ:- ಕುಟುಂಬ ಸದಸ್ಯರ ಬೆಂಬಲ ನಿಮಗಿರುವುದರಿಂದ ನೀವು ಹಮ್ಮಿಕೊಂಡ ಕಾರ್ಯಗಳನ್ನು ಧೈರ್ಯದಿಂದ ಮುನ್ನುಗ್ಗಿ ಮಾಡಬಹುದು. ಎಲ್ಲರನ್ನು ನಗುಮುಖದಿಂದ ಸ್ವಾಗತಿಸುವಿರಿ.
ಮೀನ:- ನಿಮ್ಮದೇ ಆದ ಸ್ವಂತ ನಿರ್ಣಯದಿಂದ ಎಲ್ಲವೂ ಸುಗಮವಾಗಲಿದೆ. ಆದರೆ ಇತರರ ಅಭಿಪ್ರಾಯಕ್ಕೂ ಬೆಲೆ ಕೊಡುವುದು ಒಳ್ಳೆಯದು. ತಾಯಿಯ ಆರೋಗ್ಯದ ಕಡೆ ಗಮನ ನೀಡಿ.