ಮೇಷ:- ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡರೂ ಸರ್ರನೆ ಕೆಲವು ಬಗೆಯ ಕಿರಿಕಿರಿಗಳು ಎದುರಾಗುವುವು. ಶ್ರೀಸಾಯಿ ಮಂದಿರಕ್ಕೋ ಅಥವಾ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೋ ಭೇಟಿ ನೀಡಿ.
ವೃಷಭ:- ಹಲವು ಸಂಕಷ್ಟಗಳು ಧುತ್ತನೆ ಎದುರಾಗುವ ಸಂದರ್ಭವಿದ್ದು, ಸುತರ್ಕದಿಂದಲೇ ಸೂಕ್ತವಾದ ಉತ್ತರವನ್ನು ಕಂಡುಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಕುಲದೇವತಾ ಪ್ರಾರ್ಥನೆ ಮಾಡಿ.
ಮಿಥುನ:- ನೀವು ಸರಿಯಾಗಿ ವ್ಯವಹರಿಸಲು ಹೊರಟರೂ ಕೆಲವು ಕಿಡಿಗೇಡಿಗಳಿಂದ ತೊಂದರೆ ಎದುರಾಗುವುದು. ಮಾತಾ ದುರ್ಗಾದೇವಿಯನ್ನು ಭಜಿಸಿ. ಸಾಧ್ಯವಾದಲ್ಲಿಸ್ವಲ್ಪ ಉದ್ದಿನಕಾಳುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಕಟಕ:- ಕ್ರಿಯಾಶೀಲತೆಯನ್ನು ನೀವು ಪ್ರದರ್ಶಿಸುವಿರಿ. ಕಷ್ಟಗಳಿರದ ದಿಕ್ಕುಗಳಿಂದ ನಿಮಗೆ ಹಲವಾರು ಅವಕಾಶಗಳು ಬರುವುವು. ಹಿರಿಯ ಮಕ್ಕಳ ಸಹಕಾರದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು.
ಸಿಂಹ:- ಹಿರಿಯರು ನಿಮ್ಮ ಸಹಾಯಕ್ಕೆ ಲಭಿಸುತ್ತಾರೆ. ಮುಕ್ತವಾಗಿ ಮಾತನಾಡಲು ಹಿಂಜರಿಯದಿರಿ. ಮನಸ್ಸಿನ ಭಾವನೆಗಳನ್ನು ಅವರೊಂದಿಗೆ ಹಂಚಿಕೊಂಡು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ಕನ್ಯಾ:- ಹೊಸ ಕೆಲಸದ ಬಗೆಗಿನ ನಿರೀಕ್ಷೆಗೆ ಉತ್ತಮವಾದ ಅವಕಾಶಗಳನ್ನು ಪಡೆಯಲು ಹೇರಳವಾದ ಸಾಧ್ಯತೆಗಳಿವೆ. ನಿಮ್ಮ ದೂರಾಲೋಚನೆಯಿಂದ ಮಹತ್ವದ ಕಾರ್ಯವನ್ನು ಆರಂಭಿಸಲು ಸಕಾಲ.
ತುಲಾ:- ಧನಲಾಭದ ದಾರಿಗಳನ್ನು ಸೂಕ್ತವಾಗಿ ತಿಳಿದು ಹೆಜ್ಜೆಗಳನ್ನು ಇಡಲು ವರ್ತಮಾನವು ನಿಮಗೆ ಸಹಕಾರಿಯಾಗಲಿದೆ. ಬಾಕಿ ಬರಬೇಕಾಗಿದ್ದ ಹಣಕಾಸು ಸಕಾಲದಲ್ಲಿ ಬರುವುದರಿಂದ ನಿಮ್ಮ ವ್ಯವಹಾರಕ್ಕೆ ಅನುಕೂಲವಾಗುವುದು. ಸಂಗಾತಿಯ ಎಚ್ಚರಿಕೆಯ ಮಾತನ್ನು ಆಲಿಸಿ.
ವೃಶ್ಚಿಕ:- ಸೌಮ್ಯ ಸ್ವಭಾವದ ನಿಮ್ಮನ್ನು ತೊಂದರೆಗೆ ಸಿಲುಕಿಸಲು ಕೆಲವರು ಕಾದಿದ್ದಾರೆ. ಅದರಿಂದ ಪಾರಾಗಲು ನೀವು ಉಪಾಯವನ್ನು ಮಾಡಲೇಬೇಕಾಗುವುದು. ಇದಕ್ಕಾಗಿ ಆಪ್ತ ಗೆಳೆಯ ಅಥವಾ ಬಂಧುವಿನ ನೆರವನ್ನು ಪಡೆದರೆ ಉತ್ತಮ.
ಧನುಸ್ಸು:- ಹಿಂದಿನ ಕೆಲವು ತಪ್ಪುಗಳು ಪುನಃ ಮರುಕಳಿಸದಂತೆ ಎಚ್ಚರ ವಹಿಸುವುದು ಒಳ್ಳೆಯದು. ಕೃಷಿಯ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿ. ಮನೆ, ಜಾಗ ಇತ್ಯಾದಿಗಳನ್ನು ಖರೀದಿಸಲು ಸೂಕ್ತ ಸಮಯವಲ್ಲ.
ಮಕರ:– ನಿಮ್ಮ ಬಂಧುಬಾಂಧವರು. ಇಲ್ಲವೆ ಆತ್ಮೀಯ ಸ್ನೇಹಿತರು ತಾವೇ ಮುಂದು ನಿಂತು ನಿಮಗೆ ನೈತಿಕ ಧೈರ್ಯ ತುಂಬುವರು. ಇದರಿಂದ ನಿಮಗೊಂದಿಷ್ಟು ಬಲ ಬರುವುದು. ನೀವು ಎಣಿಸಿದ ಕಾರ್ಯಗಳು ಪೂರ್ಣಗೊಳ್ಳುವುವು.
ಕುಂಭ:- ಹತ್ತಿರದ ದಾರಿಗಳಲ್ಲಿ ಶ್ರಮವಿರದ ಕೆಲಸಗಳನ್ನು ಪೂರೈಸಲು ಸಾಧ್ಯ. ಇದಕ್ಕಾಗಿ ನಿಮ್ಮ ಸಹೋದ್ಯೋಗಿಗಳು ನಿಮಗೆ ಬೆಂಬಲ ನೀಡುವರು. ವಿದೇಶದಿಂದ ಬರುವ ವಾರ್ತೆಯು ನಿಮ್ಮಲ್ಲಿನವ ಉತ್ಸಾಹ, ಚೈತನ್ಯ ತುಂಬುವುವು.
ಮೀನ:- ತೀರ ಹತ್ತಿರದವರಿಂದಲೇ ಆಗುವ ಕೆಲ ಕಿರಿಕಿರಿಗಳನ್ನು ಎದುರಿಸಲು ಸಜ್ಜಾಗಿರಿ. ಹಿಂದಿನ ನಿಮ್ಮ ಅನುಭವವೇ ನಿಮಗೆ ಇಂದು ಸಂಜೀವಿನಿಯಾಗಲಿದೆ. ನಿಮ್ಮ ಕಾರ್ಯಗಳು ಭಗವಂತನ ದಯೆಯಿಂದ ಪೂರ್ಣಗೊಳ್ಳುವುವು.