Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂರ್ 27,2019- ಶುಕ್ರವಾರ

dinabhavishya-vk-2

ಮೇಷ:- ಏಕಾಗ್ರತೆಯಿಂದ ಪ್ರಯತ್ನಿಸಿದರೆ ಕೆಲಸ ಕಾರ್ಯಗಳನ್ನು ತೃಪ್ತಿದಾಯಕವಾಗಿ ಮಾಡಿ ಮುಗಿಸಬಹುದು. ಆದ್ದರಿಂದ ನೀವು ಮಾಡುವ ಕೆಲಸದಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.

ವೃಷಭ:- ನಿಮ್ಮ ಬಳಿ ಬೇಡದ ವಿಚಾರಗಳನ್ನು ಚರ್ಚಿಸಲು ವಿನಾಕಾರಣ ಬರುವಂಥ ಜನರನ್ನು ದೂರವೇ ಇಡಿ. ಅವರಿಂದ ನಿಮಗೆ ಹೆಚ್ಚಿನ ಮಾನಸಿಕ ಹಿಂಸೆ ಆಗುವುದು. ಆರೋಗ್ಯದ ಕಡೆ ಗಮನ ಹರಿಸಿ. ಸಣ್ಣಪುಟ್ಟ ಕಾಯಿಲೆಯೆಂದು ಉದಾಸೀನ ಮಾಡದಿರಿ.

ಮಿಥುನ:- ಸರಿಯಾದ ಪೂರ್ವತಯಾರಿಗಳನ್ನು ಮಾಡಿಕೊಂಡು ಸಾಗಿದರೆ ಸಂಕಲ್ಪ ಹಾಗೂ ಗುರಿಯನ್ನು ಸಾಧಿಸಬಲ್ಲಿರಿ. ಜನ್ಮಸ್ಥ ರಾಹುವು ಶಿರೋವೇದನೆ ತಂದುಕೊಡುವ ಸಾಧ್ಯತೆ ಇದೆ. ಆದಷ್ಟು ಶಿವಪಂಚಾಕ್ಷರಿ ಮಂತ್ರವನ್ನು ಜಪಿಸಿ. ಒಳಿತಾಗುವುದು.

ಕಟಕ:- ಭಗವಂತನ ಒಲುಮೆ ಆದರೆ ಬೇರೆಯವರ ಹಂಗೇಕೆ? ನಿಮ್ಮ ಮನೋಕಾಮನೆಗಳು ಭಗವಂತನ ಕೃಪಾಶೀರ್ವಾದದಿಂದ ಪೂರ್ಣಗೊಳ್ಳುವುವು. ಬಂಧು ಬಾಂಧವರು ನಿಮಗೆ ಸಹಾಯಹಸ್ತ ನೀಡುವರು. ಕೆಲವರಿಗೆ ವಿದೇಶ ಪ್ರವಾಸ ಕೂಡಿಬರುವುದು.

ಸಿಂಹ:- ನಿಮ್ಮದಲ್ಲದ ಕೆಲಸಗಳನ್ನು ನಿಮ್ಮಿಂದ ಮಾಡಲು ನಿರೀಕ್ಷಿಸಿ ಕಿರಿಕಿರಿ ಮಾಡುವ ಜನರಿಂದ ಆದಷ್ಟು ದೂರ ಇರಿ. ನೀವು ಮಾಡುತ್ತಿರುವ ಕಾರ್ಯವು ಹತ್ತು ಜನರಿಗೆ ಮಾದರಿಯಾಗಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಏಕೆಂದರೆ ನಿಮ್ಮನ್ನೇ ಆದರ್ಶ ವ್ಯಕ್ತಿ ಎಂದು ಆರಾಧಿಸುವವರೂ ಇದ್ದಾರೆ.

ಕನ್ಯಾ:- ವಿದ್ಯಾಬಲ ಮತ್ತು ಬುದ್ಧಿಬಲದಿಂದ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂತೋಷಗೊಳಿಸುವಿರಿ. ಕೆಲವು ಮಹತ್ತರವಾದ ಜವಾಬ್ದಾರಿಗಳು ನಿಮ್ಮ ಮೈಮೇಲೆ ಬರುವುವು. ನಿಮ್ಮ ಹಳೆಯ ಗೆಳೆಯರ ಭೇಟಿ ಸಂಭವವಿದೆ.

ತುಲಾ:- ಮನಸ್ಸು ಹಾಗೂ ಸಂಕಲ್ಪಗಳನ್ನು ನಿರೀಕ್ಷಿತ ಗುರಿಗೆ ತಲುಪಿಸುವಲ್ಲಿ ಪ್ರಯತ್ನಿಸಿದರೆ ಗೆಲುವು ಕಠಿಣವೇನಲ್ಲ. ಮಡದಿ ಮಕ್ಕಳ ಭಾವನೆಗಳನ್ನು ಗೌರವಿಸಿ ಮನೆಯಲ್ಲಿ ನೆಮ್ಮದಿ ಕಂಡುಕೊಳ್ಳಿ.

ವೃಶ್ಚಿಕ:- ನಿಮ್ಮ ಪಾಡಿಗೆ ನೀವು ಇದ್ದರೂ ತಾವಾಗಿಯೇ ನಿಮ್ಮನ್ನು ಕೆಣಕಿ ಕೆರಳಿಸುವಂತಹ ಅನಿರೀಕ್ಷಿತ ಪರಿಸ್ಥಿತಿಯನ್ನು ಕೆಲವರು ಉಂಟುಮಾಡುವರು. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಒಳಿತಾಗುವುದು. ಪ್ರಯಾಣ ಕಾಲದಲ್ಲಿಎಚ್ಚರಿಕೆ ಇರಲಿ.

ಧನುಸ್ಸು:- ಪಾಲುದಾರರ ಜೊತೆಯಲ್ಲಿ ಉತ್ತಮವಾದ ಬಾಂಧವ್ಯದಿಂದ ವ್ಯವಹಾರದಲ್ಲಿ ಗೆಲುವು ಲಭಿಸಲಿದೆ. ಆದರೆ ಉತ್ಸಾಹದ ಭರದಲ್ಲಿ ಯಾವುದೇ ರೀತಿಯ ವಾಗ್ದಾನವನ್ನು ಎದುರಾಳಿಗೆ ನೀಡದಿರಿ. ಇದರಿಂದ ತೊಂದರೆಗೆ ಸಿಲುಕುವಿರಿ.

ಮಕರ:- ನಿಮ್ಮ ಪ್ರತಿಭೆಯನ್ನು ಗುರುತಿಸುವ ಮತ್ತು ಪ್ರಶಂಸೆ ಮಾಡುವಂಥ ಸಜ್ಜನರನ್ನು ಭೇಟಿ ಆಗುವಿರಿ. ಎಲ್ಲಾಕಾರ್ಯಗಳಲ್ಲೂಯಶಸ್ಸನ್ನು ಹೊಂದುವಿರಿ. ಆರೋಗ್ಯದ ಕಡೆ ಗಮನ ನೀಡಿ.

ಕುಂಭ:- ಹೆಚ್ಚಿನ ಪರಿಶ್ರಮಕ್ಕೆ ಮುಂದಾಗುವುದರ ಮೂಲಕವೇ ವಿಶೇಷವಾದ ಯಶಸ್ಸು ಹೊಂದಲು ಕಾರಣವಾಗುವುದು. ನಿಮ್ಮ ಬಹುದಿನದ ಕನಸು ನನಸಾಗಲಿದೆ. ವಿವಿಧ ಮೂಲಗಳಿಂದ ಹಣಕಾಸು ಬರುವುದು.

ಮೀನ:– ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುವು. ಆಸ್ತಿಗೆ ಸಂಬಂಧಪಟ್ಟ ವಿಷಯದಲ್ಲಿ ಹಿನ್ನಡೆ ಅಥವಾ ಮೋಸ ಆಗುವ ಸಂಭವ ಹೆಚ್ಚು. ಮನೆಯ ಹಿರಿಯರ ಆರೋಗ್ಯದಲ್ಲಿಆಸ್ಪತ್ರೆ ಖರ್ಚು ಬರುವ ಸಂಭವವಿದೆ.

Latest News

Lorry driver
ಪ್ರಮುಖ ಸುದ್ದಿ

ಕುಡಿದು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ ಪೊಲೀಸರು ; ಕೇಸ್ ದಾಖಲಿಸಿಕೊಳ್ಳದೆ ಕಾನೂನು ಉಲ್ಲಂಘನೆ!

ಕುಡಿದ ಆಮಲಿನಲ್ಲಿದ್ದ ಮೂವರು ಪೊಲೀಸರು, “ನೀನು ಯಾವ ಸೀಮೆ ಡ್ರೈವರ್ ___*****” ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಚಾಲಕನ ಕೈ, ಕಾಲು ಸೇರಿದಂತೆ ಗುಪ್ತಾಂಗದ ಜಾಗಕ್ಕೆ ಒದ್ದು, ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.