vijaya times advertisements
Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 28,2019- ಶನಿವಾರ

signwheel-1

ಮೇಷ:- ಅಪರಿಚಿತರನ್ನು ಬೇಗನೆ ನಂಬಿ ಹಣ ಕಳೆದುಕೊಳ್ಳಬೇಡಿ. ಬೆಡಗಿನ ಅಥವಾ ನಯವಂಚಕ ಮಾತುಗಳ ಮೂಲಕ ಮೋಸಹೋಗುವ ಸಾಧ್ಯತೆ ಇದೆ. ಮನೋಜಯವನ್ನು ಹೊಂದಿದ ಆಂಜನೇಯ ಸ್ವಾಮಿಯನ್ನು ಮನಸಾ ಸ್ಮರಿಸಿ.

ವೃಷಭ:- ನಿಮ್ಮದೇ ಆದ ಕೆಲ ದೌರ್ಬಲ್ಯಗಳನ್ನು ಬಿಟ್ಟುಬಿಡಿ. ಹತ್ತಾರು ಜನರೊಡನೆ ಬೆರೆಯುವ ಅಭ್ಯಾಸವನ್ನು ಮಾಡಿಕೊಂಡಲ್ಲಿ ಹೊಸ ಚೈತನ್ಯದಿಂದ ಕಂಗೊಳಿಸುವಿರಿ. ಮತ್ತು ಹಿಡಿದ ಕಾರ್ಯದಲ್ಲಿ ಯಶಸ್ಸು ಸಂಪಾದಿಸುವಿರಿ.

ಮಿಥುನ:- ನಗುವು ಎಲ್ಲರನ್ನು ಆಕರ್ಷಿಸುತ್ತದೆ. ಹಾಗಾಗಿ ಮನಸ್ಸಿನಲ್ಲಿ ಸಾವಿರ ನೋವಿದ್ದರೂ ನಗುವಿನ ಮುಖವಾಡವನ್ನು ಧರಿಸಿ. ಹೊಸ ಕೆಲಸದಲ್ಲಿನ ಹೊಸತನದ ಜವಾಬ್ದಾರಿಯನ್ನು ನಿರ್ವಹಿಸಲು ಅದು ಅನುಕೂಲ ಮಾಡಿಕೊಡುವುದು. ದುರ್ಗಾ ಜಪವನ್ನು ತಪ್ಪದೇ ಮಾಡಿ.

ಕಟಕ:– ಸಾಲ ಕೇಳುವವರು ನಾಜೂಕಿನ ಮಾತಿನ ಮೂಲಕ ನಿಮ್ಮ ಸಮೀಪಕ್ಕೆ ಬರಲಿದ್ದಾರೆ. ಅವರನ್ನು ಅಷ್ಟೇ ಚಾಣಾಕ್ಷತನದಿಂದ ಹೊರಹಾಕಿ. ದೈವವೂ ನಿಮಗೆ ಸಹಾಯ ಮಾಡುವುದು. ಸಂಗಾತಿಯ ಸಂಗಡ ಮನಸ್ತಾಪ ಆಗುವ ಸಾಧ್ಯತೆ ಇದೆ.

ಸಿಂಹ:- ಸಕಲ ದುರಿತಗಳನ್ನು ನಿವಾರಿಸಿ ಮನಸ್ಸಿಗೆ ಸಂತೋಷವನ್ನು ಉಂಟುಮಾಡುವ ಶಿವನನ್ನು ಭಕ್ತಿಯಿಂದ ಆರಾಧಿಸುವುದು ಒಳ್ಳೆಯದು. ಸಂಜೆ ಬಡವರಿಗೆ ಆಹಾರವನ್ನು ನೀಡಿ. ಆಂಜನೇಯ ಸ್ವಾಮಿಯ ದರ್ಶನ ಪಡೆದು ಬನ್ನಿ.

ಕನ್ಯಾ:- ಬಂಧುಗಳಲ್ಲಿಒಬ್ಬರು ನಿಮ್ಮ ಪಾಲಿಗೆ ಹೊಸ ರೀತಿಯ ಬೆಂಬಲವನ್ನು ನೀಡಲಿದ್ದಾರೆ. ನೀವು ಬೇಡವೇ ಬೇಡ ಎಂದು ಹೇಳುವ ವೃತ್ತಿಯನ್ನು ಅನಿವಾರ್ಯವಾಗಿ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇದೆ. ಆದರೆ ಪ್ರತಿಫಲವನ್ನು ಅಪೇಕ್ಷಿಸುವಂತಿಲ್ಲ.

ತುಲಾ:- ಹಿರಿಯರನ್ನು ಗೌರವಿಸು, ಹಿರಿತನದಿಂದ ಬಾಳು ಎನ್ನುವಂತೆ ಮನೆಯ ಹಿರಿಯರ ಆಶೋತ್ತರಗಳಿಗೆ ಬೆಲೆ ಕೊಡಿ. ಅವರ ಆರೋಗ್ಯ ತಪಾಸಣೆಗಾಗಿ ಸಕ್ರಿಯ ಭಾಗವಹಿಸುವಿಕೆ ಮುಂತಾದ ಕಾರ್ಯಗಳನ್ನು ಮಾಡುವ ಮೂಲಕ ಇಷ್ಟಾರ್ಥ ಸಿದ್ಧಿಯನ್ನು ಹೊಂದುವಿರಿ.

ವೃಶ್ಚಿಕ:- ಅನೇಕ ಸಮಸ್ಯೆಗಳನ್ನು ಇಟ್ಟುಕೊಂಡರೂ ಮಾತಿನ ಚಾಣಾಕ್ಷತೆಯಿಂದ ವರ್ತಮಾನವನ್ನು ಖಂಡಿತವಾಗಿ ಗೆಲ್ಲುವಿರಿ. ಭವಿಷ್ಯದಲ್ಲಿ ನಿಮಗೆ ಉತ್ತಮ ದಿನಗಳಿವೆ. ನಿಮ್ಮನ್ನು ಆರಾಧಿಸುವ ಬಹಳ ಜನ ನಿಮ್ಮ ಹಿಂಬಾಲಕರಾಗುವರು. ಇದರಿಂದ ನಿಮ್ಮ ವರ್ಚಸ್ಸು ಹೆಚ್ಚಾಗುವುದು.

ಧನುಸ್ಸು:- ತುಂಬಾ ಹಳೆಯ ವ್ಯಾಜ್ಯದ ವಿಚಾರದಲ್ಲಿ ಹತ್ತಿರದ ಸ್ನೇಹಿತರಿಂದ ಪರಿಹಾರದ ದಾರಿಗಳು ಸಿಗಲಿವೆ. ಗುರುವಿನ ಸ್ತೋತ್ರ ಪಠಿಸಿ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಎಳ್ಳುದೀಪ ಹಚ್ಚಿ. ಪ್ರಯಾಣದಲ್ಲಿಎಚ್ಚರಿಕೆ ಇರಲಿ.

ಮಕರ:- ಸಿಟ್ಟಿನ ಮಾತುಗಳನ್ನು ಬಿಟ್ಟುಬಿಡಿ. ಮುಂಗೋಪದಿಂದ ಒಳ್ಳೆಯ ಸ್ನೇಹಿತರು ದೂರವಾಗುವರು. ತಾಳಿದವನು ಬಾಳಿಯಾನು. ಆದಷ್ಟು ತಾಳ್ಮೆಯಿಂದ ಇರಿ. ಗುರುವಿನ ಶ್ರೀರಕ್ಷೆ ಇರುವುದರಿಂದ ಮುಂದಿನ ದಾರಿ ಉತ್ತಮವಾಗಿದೆ.

ಕುಂಭ:- ಮನೆಯಲ್ಲಿನ ಸದಸ್ಯರ ಜತೆ ಮನಬಿಚ್ಚಿ ಮಾತನಾಡಿ. ಇದರಿಂದಲೇ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಕೆಲವು ಹೊಸ ತಂತ್ರ ಸೂತ್ರಗಳಿಂದ ಹೆಚ್ಚಿನ ಒಳಿತನ್ನು ಹೊಂದಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ:- ಗಾಳಿ ಬಂದಾಗ ತೂರಿಕೋ ಎನ್ನುವಂತೆ ಗ್ರಹಗತಿಗಳು ನಿಮ್ಮ ಪರವಾಗಿ ಕೆಲಸ ಮಾಡಲಿವೆ. ಹಾಗಾಗಿ ನಿಮ್ಮ ಇಚ್ಛಿತ ಕಾರ್ಯಗಳನ್ನು ಪೂರೈಸಿಕೊಳ್ಳಿ. ನಿಮಗೆ ಬರಬೇಕಾಗಿದ್ದ ಹಣಕಾಸು ನಿಮ್ಮ ಕೈಸೇರಲಿದೆ.

Latest News

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಇಂದು ಮತ ಎಣಿಕೆ ಆರಂಭ

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು

ರಾಜಕೀಯ

ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ

ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.