Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಅಕ್ಟೋಬರ್ 09,2019-ಬುಧವಾರ

images

ಮೇಷ:- ಉನ್ನತ ಸ್ಥಾನವನ್ನು ಅಲಂಕರಿಸುವ ಯೋಗ ಬರುವ ಸಾಧ್ಯತೆ ಇದೆ. ವರ್ತಮಾನದ ದಿನಗಳು ನಿಮಗೆ ಅನುಕೂಲಕರ ವಾತಾವರಣ ಸೃಷ್ಟಿಸುವುದು. ವಿವಿಧ ಮೂಲಗಳಿಂದ ಹಣ ಬರುವುದು.

ವೃಷಭ:- ಎಚ್ಚರಿಕೆ ಇರಲಿ. ಹಳೆಯ ವಿಷಯವನ್ನು ಕೆದಕಿ ನಿಮ್ಮನ್ನು ನಗೆಪಾಟಲಿಗೆ ಈಡು ಮಾಡುವ ಸಾಧ್ಯತೆಗಳು ಇವೆ. ಹಾಗಾಗಿ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ. ಮಕ್ಕಳ ವಿಷಯದಲ್ಲಿಅತಿಯಾದ ವಿಶ್ವಾಸ ಇಡುವುದು ಒಳ್ಳೆಯದಲ್ಲ.

ಮಿಥುನ:- ನಿಮ್ಮ ಆಸಕ್ತಿಯ ವಿಷಯವನ್ನು ಕಗ್ಗಂಟು ಮಾಡಲು ಹತ್ತಿರದವರು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯ ಆರಾಧನೆ ಮಾಡುವುದು ಒಳ್ಳೆಯದು. 250 ಗ್ರಾಂ ಉದ್ದಿನಕಾಳುಗಳನ್ನು ದಾನಮಾಡಿ.

ಕಟಕ:- ತುರ್ತು ಅವಶ್ಯಕತೆ ಕಾರಣದಿಂದ ಬೇಡವಾಗಿರುವ ಪ್ರವಾಸ ಒಂದನ್ನು ಕೈಗೊಳ್ಳಬೇಕಾಗಿ ಬರುವ ಸಾಧ್ಯತೆ ಇದೆ. ಆದಷ್ಟು ಪ್ರಯಾಣದಲ್ಲಿಎಚ್ಚರಿಕೆ ಅಗತ್ಯ. ಗುರು, ಹಿರಿಯರ ಆಶೀರ್ವಾದ ಪಡೆದು ಪ್ರಯಾಣ ಮಾಡಿ.

ಸಿಂಹ:- ಗುರಿ ತಲುಪಲು ಬೇಕಾದ ಅವಕಾಶ ಜಾಸ್ತಿಯೇ ಇದೆಯಾದರೂ ದುಡುಕಿನ ಮಾತುಗಳು ತೊಂದರೆ ತರುವ ಸಾಧ್ಯತೆ ಇದೆ. ನಿಮ್ಮ ಪಾಂಡಿತ್ಯಕ್ಕೆ ಮತ್ತು ನೀವು ಇರುವ ಸ್ಥಾನಮಾನವನ್ನು ಅರಿತು ತೂಕಬದ್ಧವಾದ ಮಾತನ್ನು ಆಡುವುದು ಒಳ್ಳೆಯದು.

ಕನ್ಯಾ:– ಸಾಮಾಜಿಕ ವಲಯದಲ್ಲಿ ನಿಮಗೆ ವಿಶೇಷವಾದ ಜವಾಬ್ದಾರಿ ಬರಲು ವರ್ತಮಾನವು ಸಹಕರಿಸುವುದು. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಬಂಧುಗಳು ನಿಮ್ಮ ಸಹಾಯಹಸ್ತ ಕೇಳಿಬರುವರು.

ತುಲಾ:- ಬೇಡದ ಒತ್ತಡಗಳನ್ನು ಎದುರಿಸಿ ದಣಿಯುವ ಪರಿಸ್ಥಿತಿಗೆ ತುತ್ತಾಗುವ ಸಾಧ್ಯತೆಗಳು ಅಧಿಕವಾಗಿವೆ. ಎಚ್ಚರದಿಂದ ಇರಿ. ಮಡದಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸುವುದು ಒಳ್ಳೆಯದು. ಅವಶ್ಯಕತೆಗೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು.

ವೃಶ್ಚಿಕ:– ಯುದ್ಧಕ್ಕಿಂತ ಮುಂಚೆಯೇ ಸೋಲಲು ನಿರ್ಧರಿಸಬೇಡಿ. ಶಕ್ತಿಯಿರುವವರೆಗೂ ಹೋರಾಡಿ. ಭಗವಂತ ನಿಮಗೆ ಸಹಾಯ ಮಾಡುವನು. ಕೊನೆ ಹಂತದಲ್ಲಿ ನೀವೇ ಜಯಶಾಲಿಯಾಗುವಿರಿ. ನಿಮ್ಮ ವಿಜಯವು ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗುವುದು.

ಧನುಸ್ಸು:– ಯೋಚಿಸದೆ ಮಾತನಾಡಲು ಮುಂದಾಗದಿರಿ. ವಿರೋಧಿಗಳ ಟೀಕೆಗಳಿಗೆ ನೀವೇ ಅವಕಾಶ ಮಾಡಿಕೊಡದಿರಿ. ಜನ್ಮಶನಿಯು ಕೆಲವು ಅವಮಾನ ಪ್ರಸಂಗಗಳನ್ನು ಎದುರಿಸುವಂತೆ ಮಾಡುವನು. ದಶರಥಕೃತ ಶನಿ ಸ್ತೋತ್ರವನ್ನು ಪಾರಾಯಣ ಮಾಡಿ.

ಮಕರ:- ನಿಮ್ಮಲ್ಲಿರುವ ಜ್ಞಾನಸಂಪತ್ತನ್ನು ಪರರಿಗೆ ಧಾರೆ ಎರೆಯುವ ನಿಮ್ಮ ಕೌಶಲ್ಯವು ಸಮಾಜದಲ್ಲಿ ಮನ್ನಣೆ ಗಳಿಸುವುದು. ಈ ಮೂಲಕ ಹಣಕಾಸು ಕೂಡಾ ನಿಮಗೆ ಬರುವುದು. ಮನೆಯಲ್ಲಿಸಂತಸದ ವಾತಾವರಣ ಮೂಡುವುದು.

ಕುಂಭ:- ಭಗವಂತನ ಒಲುಮೆ ಇದ್ದರೆ ಬೇರೆಯವರ ಹಂಗೇಕೆ? ಅಂತೆಯೇ ನೀವು ಮಾಡಿದ ನಿಸ್ವಾರ್ಥ ಸೇವೆಯು, ನಿಮಗೆ ವರರೂಪದಲ್ಲಿ ಫಲ ನೀಡುವುದು. ಮೇಲಧಿಕಾರಿಗಳಿಂದ ಸಿಹಿಸುದ್ದಿಯನ್ನು ಕೇಳುವಿರಿ.

ಮೀನ:- ಸ್ಥಿರಾಸ್ಥಿ ಖರೀದಿಯಲ್ಲಿ ಮೋಸ ಹೋಗುವ ಸಂದರ್ಭವಿದೆ. ಹಾಗಾಗಿ ಆಸ್ತಿ ಖರೀದಿಯ ವಿಷಯದಲ್ಲಿಸರಿಯಾದ ಕಾಗದ ಪತ್ರಗಳನ್ನು ಪರಿಶೀಲಿಸಿ ಮುಂದುವರಿಯಿರಿ. ಬ್ಯಾಂಕಿನ ಮೂಲಕ ಆಸ್ತಿ ಖರೀದಿಗೆ ಹಣ ಸಹಾಯ ದೊರೆಯುವುದು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.