ಮೇಷ:- ಅನೇಕ ದಿನಗಳಿಂದ ಮನಸ್ಸನ್ನು ಕಾಡುತ್ತಿದ್ದ ಸಮಸ್ಯೆಗಳು ಒಂದು ನಿಶ್ಚಿತವಾದ ಪರಿಹಾರವನ್ನು ಕಾಣಬಲ್ಲವು. ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ದೊರೆಯುವುದು. ಖರ್ಚಿಗೆ ತಕ್ಕಷ್ಟು ಆದಾಯ ಒದಗಿ ಬರುವುದು.
ವೃಷಭ:- ಇರುವ ಕೆಲಸವೇ ನಿಮ್ಮ ಪಾಲಿಗೆ ರಗಳೆ ಆಗುತ್ತಿದೆ. ಆದರೂ ಅತಿಯಾದ ಅವಸರ ತೋರಿ ಕೆಲಸವನ್ನು ಬಿಡದಿರಿ. ಗುರುವಿನ ಮಂತ್ರವನ್ನು ಪಠಿಸಿರಿ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರುವುದು.
ಮಿಥುನ:- ಯಶಸ್ಸಿನ ದಾರಿಯಲ್ಲಿರುವ ನಿಮ್ಮನ್ನು ಸ್ವಾರ್ಥಿಗಳು ಮುತ್ತಿಕೊಳ್ಳದ ಹಾಗೆ ಸಾಕಷ್ಟು ಎಚ್ಚರ ಹೊಂದಿರಿ. ಕೆಲಸದ ಒತ್ತಡದಿಂದಾಗಿ ಶಿರೋವೇದನೆ ಕಂಡು ಬರುವ ಸಾಧ್ಯತೆ ಇರುವುದು. ಆದಷ್ಟು ಮನಸ್ಸಿನ್ನು ಶಾಂತಗೊಳಿಸಿರಿ.
ಕಟಕ:– ಯಾರನ್ನೇ ಆಗಲಿ ಅನಿವಾರ್ಯ ಎಂದು ಪರಿಗಣಿಸಲು ಮುಂದಾಗದಿರಿ. ಭಗವಂತನ ಸಹಾಯದಿಂದ ಯಾರು ಸಹಾಯ ಮಾಡದಿದ್ದರೂ ನಿಮ್ಮ ಕೆಲಸ ಸುಗಮವಾಗಿ ಆಗುವುದು. ಜನರಿಗೆ ಸಲಾಂ ಹೊಡೆಯುವ ಬದಲು ಜನಾರ್ಧನನಿಗೆ ಶರಣು ಹೋಗಿ.
ಸಿಂಹ:- ಸಮಸ್ಯೆಗಳ ನಡುವೆಯೇ ಸಾಗಬೇಕಾದ ಅನಿವಾರ್ಯತೆ ನಿಮ್ಮ ಎದುರಿಗೆ ಇದೆ. ಆದರೆ ಇದು ನಿಮ್ಮ ಸ್ವಯಂಕೃತ ಅಪರಾಧವೇ ಸರಿ. ಕೆಲವೊಮ್ಮೆ ಸೋತು ಗೆಲ್ಲುವುದು ಜಾಣತನ. ಬಾಗಿದವನು ಮುಂದೊಂದು ದಿನ ಬೀಗುವನು ಎಂಬುದನ್ನು ಮರೆಯದಿರಿ.
ಕನ್ಯಾ:- ಕೆಲಸದಲ್ಲಿ ಏಕತಾನತೆಯ ನಡುವೆಯೂ ಸಹ ಕೆಲಸಗಾರರ ಬೆಂಬಲದಿಂದ ನಿಮಗೆ ಶಾಂತಿ ದೊರೆಯಲಿದೆ. ವಿನಾಕಾರಣ ಬೇಡದ ಚಿಂತನೆಗಳನ್ನು ಹೊರ ಹಾಕಿರಿ. ನಿಮ್ಮ ಮನಸ್ಸಿಗೆ ಖುಷಿ ಕೊಡುವ ಕೆಲಸಗಳತ್ತ ಗಮನನೀಡಿರಿ.
ತುಲಾ:– ಹೊಸ ಹೊಸ ಯೋಜಜನೆಗಾಗಿ ಬಂಡವಾಳ ಹೂಡಲು ಪಾಲುದಾರರು ದೊರೆಯುವ ಸಂದರ್ಭ ಇದೆ. ಇದು ನಿಮ್ಮ ಸಂತೋಷಕ್ಕೆ ಕಾರಣವಾಗುವುದು. ನಿಮ್ಮ ಸಂಗಾತಿಯ ಸಲಹೆಗಳು ಸೂಕ್ತ ಎನಿಸಿದಲ್ಲಿ ತೆಗೆದುಕೊಳ್ಳಲು ಅಭ್ಯಂತರವಿರುವುದಿಲ್ಲ.
ವೃಶ್ಚಿಕ:- ಸರಳವಾಗಿರುವ ದಾರಿಯನ್ನು ಕಗ್ಗಂಟಾಗಿಸಲೆಂದೇ ಕೆಲವರು ತರಲೆ ಕೆಲಸ ಮಾಡುತ್ತಾರೆ. ಈ ಬಗ್ಗೆ ಜಾಗ್ರತೆಯಾಗಿ ಇರಿ. ಹಣಕಾಸಿನ ಮುಗ್ಗಟ್ಟು ಕಡಿಮೆ ಆಗುವುದು. ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ಮಾನ-ಸನ್ಮಾನಗಳು ಆಗುವವು.
ಧನಸ್ಸು:- ಶ್ರಮವಹಿಸಿ ಪಡೆದ ಪದೋನ್ನತಿಯು ಕೈಗೆ ದೊರೆಯುವಲ್ಲಿ ವಿಳಂಬತೆ ಉಂಟಾಗುತ್ತಿರುವುದು. ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತ ಪರಿಸ್ಥಿತಿ ನಿಮ್ಮದು. ಮನೋಜಯವುಳ್ಳ ಆಂಜನೇಯನನ್ನು ಸ್ಮರಿಸಿ ಜಯಶೀಲರಾಗಿರಿ.
ಮಕರ:- ನಿಮ್ಮ ಅನಿರೀಕ್ಷಿತವಾದ ಪ್ರವಾಸದಲ್ಲಿ ನೀರಿನ ಕುರಿತು ಎಚ್ಚರ ಇರಲಿ. ಇದು ನಿಮಗೆ ಉದರ ಸಮಸ್ಯೆಗಳಿಗೆ ಕಾರಣವಾಗುವುದು. ಹೊಸ ಜನರ ಸಂಪರ್ಕ ನಿಮ್ಮಲ್ಲಿ ಹೊಸ ಶಕ್ತಿಯನ್ನು ಹುಟ್ಟು ಹಾಕಲಿದೆ.
ಕುಂಭ:- ತಲೆನೋವಾಗಿದ್ದ ಜನರು ನಿಮಗೆ ಶರಣಾಗುವ ಲಕ್ಷಣಗಳು ಇಂದು ಸ್ಪಷ್ಟವಾಗಿ ಕಾಣುತ್ತಿವೆ. ನೀವು ನಿರಾಳರಾಗಿರಿ. ಬಹುದಿನದ ನಿಮ್ಮ ತಪಸ್ಸಿಗೆ ಭಗವಂತ ಒಲಿದು ನಿಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸುವನು.
ಮೀನ:- ಕೆಲಸ ಕಾರ್ಯಗಳು ಇನ್ನೇನು ಮುಗಿದೆ ಬಿಟ್ಟವು ಎನ್ನುವಷ್ಟರಲ್ಲಿ ಅಡೆತಡೆಗಳು ಬಂದು ನಿಮ್ಮ ಉತ್ಸಾಹಕ್ಕೆ ತಣ್ಣೀರನ್ನು ಎರಚುವವು. ಆದಷ್ಟು ತಾಳ್ಮೆ ವಹಿಸಿ, ತಾಳಿದವನು ಬಾಳಿಯಾನು. ಮುಂದಿನ ದಿನಗಳು ಉತ್ತಮವಾಗಿರುವುದು.