vijaya times advertisements
Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 6,2019- ಶುಕ್ರವಾರ

signwheel-1

ಮೇಷ:- ವಿನಾಕಾರಣವಾಗಿ ನಿಮ್ಮ ದಾರಿಯನ್ನು ಬದಲಾಯಿಸದಿರಿ. ಅನ್ಯರ ಅಸಮಾಧಾನಗಳು ದೂರವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತವೆ. ಮಾತಾ ದುರ್ಗಾದೇವಿಯ ಸ್ತೋತ್ರ ಪಠಿಸಿ. ಒಳಿತಾಗುವುದು.

ವೃಷಭ:– ಭಿನ್ನವಾದ ಎರಡು ಶಕ್ತಿಗಳು ನಿಮ್ಮನ್ನು ಅಧೀರಗೊಳಿಸುವ ಸಂಭವ ಇದೆ. ಆದರೂ ಧೈರ್ಯಗೆಡದಿರಿ. ಎಲ್ಲಾ ಕೆಲಸಗಳು ಯಶಸ್ವಿಯಾಗಲು ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ. ಮಕ್ಕಳ ಅಭ್ಯುದಯವು ನಿಮಗೆ ಸಂತಸ ನೀಡುವುದು. 

ಮಿಥುನ:- ಮನದ ಸಂಕಲ್ಪಗಳು ಭಗವಂತನ ಅನುಗ್ರಹದಿಂದ ಈಡೇರುವುವು. ಕೋರ್ಟು ಕಚೇರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಆಗುವುದು. ವಿಷ್ಣುವಿನ ಆರಾಧನೆ ಮಾಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. 

ಕಟಕ:- ಹಲವರನ್ನು ಎದುರು ಹಾಕಿಕೊಳ್ಳುವುದು ಅನಿವಾರ್ಯ. ಏಕೆಂದರೆ ಎಲ್ಲರ ಪ್ರೀತಿ ಗಳಿಸಲು ಆಗುವುದಿಲ್ಲ. ಎದುರಾಗುವ ಸನ್ನಿವೇಶಗಳನ್ನು ಬಹು ನಾಜೂಕಾಗಿ ಕೈಗೆತ್ತಿಕೊಳ್ಳಿ. ಗುರು-ಹಿರಿಯರ ಆಶೀರ್ವಾದದ ಬಲದಿಂದ ಒಳಿತಾಗುವುದು. 

ಸಿಂಹ:- ಅನೇಕ ರೀತಿಯ ಕ್ಷಿಪ್ರಬೆಳವಣಿಗೆಗಳನ್ನು ಎದುರಿಸಬೇಕಾಗುವುದು. ಆ ವಿಚಾರಗಳನ್ನು ಧೈರ್ಯದಿಂದ ಎದುರಿಸಿ. ಅಂತಿಮ ಗೆಲುವು ನಿಮ್ಮದಾಗುವುದು. ನಿಮ್ಮನ್ನು ವಿರೋಧಿಸುತ್ತಿದ್ದವರೇ ನಿಮ್ಮ ಸಖ್ಯವನ್ನು ಬಯಸಿ ಬರುವರು. 

ಕನ್ಯಾ:-ನಿಮ್ಮ ಮನದ ಬಯಕೆಗಳು ಶೀಘ್ರವಾಗಿ ಈಡೇರಬೇಕು ಎಂಬ ವಿಚಾರದಲ್ಲಿ ತಡೆ ಬರುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಮನಸಾ ಭಜಿಸಿ. 5 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಸಿಹಿ ಹಂಚಿ. 

ತುಲಾ:– ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಹೊಯ್ದಾಟವನ್ನು ಎದುರಿಸಬೇಕಾಗಿ ಬರುವುದು. ದಿನದಿಂದ ದಿನಕ್ಕೆ ಆರ್ಥಿಕ ಮುಗ್ಗಟ್ಟು ಅಧಿಕವಾಗುವುದರಿಂದ ಅನಗತ್ಯ ಖರ್ಚು, ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. 

ವೃಶ್ಚಿಕ:– ನಿಯಮಗಳನ್ನು ಮುರಿಯುವ ಯಾವುದೇ ಕೆಲಸಗಳಿಗೂ ಕೈಹಾಕದಿರುವುದು ಉತ್ತಮ. ಇದರಿಂದ ನಿಮ್ಮ ಮನಸ್ಸಿನ ಸಂತಸ ಹಾಳಾಗುವುದು. ದ್ವಿತೀಯ ಧನಸ್ಥಾನದ ಗುರುವು ಹಣದ ಕೊರತೆಯನ್ನು ಉಂಟುಮಾಡುವುದಿಲ್ಲ. 

ಧನಸ್ಸು:– ಸದ್ಯದ ಪರಿಸ್ಥಿತಿಯಲ್ಲಿ ಕೆಲಸವು ನಿಮ್ಮ ವಿರುದ್ಧವಾಗಿ ಆಗುವುದರಿಂದ ಹೌಹಾರುವ ಸ್ಥಿತಿಯಿಂದಾಗಿ ನೀವು ಕಂಗಾಲಾಗುವಿರಿ. ಆದರೂ ಅಂತಿಮವಾಗಿ ಒಳಿತು ನಿಮ್ಮ ಪಾಲಿಗೆ ಜರುಗುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು. 

ಮಕರ:- ನೀವು ಬಹಳ ಚತುರರೇ ಆಗಿದ್ದೀರಿ. ಆದರೂ ಕೆಲವು ಸಮಸ್ಯೆಗಳನ್ನು ವಿನಾಕಾರಣ ಎದುರಿಸಬೇಕಾಗುವುದು. ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ. ಆಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿ. ಇದರಿಂದ ಒಳಿತಾಗುವುದು. 

ಕುಂಭ:– ಸರ್ವಮಂಗಳೆಯಾದ ಅನ್ನಪೂರ್ಣ ದೇವಿಯನ್ನು ಮನಸಾ ಭಜಿಸಿ. ಇದರಿಂದ ವಿಸ್ಮಯಕರವಾದ ಕಾರ್ಯಗಳು ಜರುಗುವುವು. ಮತ್ತು ಸಾಮಾಜಿಕವಾಗಿ ನೀವು ಜನರಿಂದ ಗೌರವಿಸಲ್ಪಡುವಿರಿ. ಹಣಕಾಸಿನ ಚಿಂತೆ ದೂರವಾಗುವುದು. 

ಮೀನ:– ನಡೆಸದಿರುವ ಪ್ರಮಾದವನ್ನು ನಿಮ್ಮ ತಲೆಗೆ ಸುತ್ತುವ ಹಲವಾರು ಪ್ರಯತ್ನಗಳು ನಡೆಯುವುವು. ಆದರೆ ನಿಮ್ಮ ಬಂಧುಬಾಂಧವರು ಹಾಗೂ ಹಿತೈಷಿಗಳು ಸಕಾಲಿಕ ಸಾಕ್ಷಿ ನುಡಿಯುವುದರಿಂದ ಅನುಕೂಲವಾಗುವುದು. 

Latest News

ರಾಜ್ಯ

ಬೆಳಗಾವಿ ಗಡಿ ವಿವಾದ : ಭದ್ರತೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದ ಮಹಾರಾಷ್ಟ್ರ!

ಬೆಳಗಾವಿ ಗಡಿ ವಿವಾದದ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಿರುಕು ಶೀಘ್ರದಲ್ಲೇ ಶಮನಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದೆ.

ಮನರಂಜನೆ

ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು