Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ.? ಸೆಪ್ಟೆಂಬರ್ 4, 2019- ಬುಧವಾರ

zodiac

ಮೇಷ :- ನಿಮ್ಮ ಮನದ ನಿರ್ಧಾರಗಳನ್ನು ನೀವೇ ಪುನಃ ಪರಿಶೀಲಿಸಬೇಕಾದ ಅನಿವಾರ್ಯತೆ ಎದುರಾಗುವುದು. ಕೆಲವೊಮ್ಮೆ ನಿಮ್ಮ ವಿಚಾರಧಾರೆಗಳಿಂದ ಹಿಂದೆ ಸರಿದು ಎದುರಿಗಿನ ವ್ಯಕ್ತಿಯ ವಿಚಾರಗಳಿಗೆ ಬೆಲೆ ಕೊಡಬೇಕಾಗುವುದು. ಇದು ನಿಮ್ಮ ಆತ್ಮ ವಿಮರ್ಶೆಗೆ ದಾರಿ ಆಗುವುದು.

ವೃಷಭ :- ಸೂಕ್ತವಲ್ಲದ ವಿಚಾರಗಳನ್ನು ಕೈಗೆತ್ತಿ ತೊಂದರೆ ಕೊಡುವಂತಹ ವ್ಯಕ್ತಿಗಳಿಂದ ದೂರವಿರಿ. ಗುರುವಿನ ಶುಭ ಹಾರೈಕೆಯಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ನಿಮ್ಮ ನಿಲುವುಗಳಿಗೆ ನಿಮ್ಮ ಸಂಗಾತಿಯ ಪೂರ್ಣ ಬೆಂಬಲವಿರುತ್ತದೆ. 

ಮಿಥುನ :– ಬಾಯಿ ತಪ್ಪಿ ಆಡಿದ ಮಾತಿಗೆ ದಂಡ ತೆರಬೇಕಾಗುವುದು. ಇದು ಆಕಸ್ಮಿಕವಾದರೂ ಪರಿಣಾಮ ವೀಪರಿತವಾಗಿರುವುದು. ಹಾಗಾಗಿ ಮೇಲಧಿಕಾರಿಗಳೊಡನೆ ಮಾತುಕತೆ ನಡೆಸುವಾಗ ತುಸು ಎಚ್ಚರಿಕೆಯಿಂದ ಇರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. 

ಕಟಕ :- ಮಾಯಾಕಾರಕ ರಾಹು ನಿಮ್ಮ ರಾಶಿಯಿಂದ ವ್ಯಯಸ್ಥಾನದಲ್ಲಿಸಂಚರಿಸುವ ಮೂಲಕ ಕೌಟುಂಬಿಕ ಜೀವನದಲ್ಲಿಅಸಮಾಧಾನ, ಸಣ್ಣ ಪುಟ್ಟ ಜಗಳಗಳಿಗೆ ಕಾರಣೀಭೂತನಾಗುವ ಸಾಧ್ಯತೆ ಇದೆ. ದುರ್ಗಾ ಮಂತ್ರವನ್ನು ಪಠಿಸುವುದು ಒಳ್ಳೆಯದು. ಉದ್ದಿನಕಾಳನ್ನು ದಾನ ಮಾಡಿ. 

ಸಿಂಹ :- ಮನೆಯ ಸದಸ್ಯರೆಲ್ಲರ ಒಪ್ಪಿಗೆ ಪಡೆದು ಒಂದು ತೀರ್ಮಾನಕ್ಕೆ ಬರುವುದು ಉತ್ತಮ. ಇದರಿಂದ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ನಿಮಗೆ ಅರಿವಾಗುವುದು. ಸಂಸಾರದ ಗುಟ್ಟು ವ್ಯಾಧಿರಟ್ಟು ಎನ್ನುವಂತೆ ಸಂಸಾರದ ಸಣ್ಣ ಪುಟ್ಟ ಸಮಸ್ಯೆಗಳನ್ನು ಇತರರ ಮುಂದೆ ಚರ್ಚಿಸದಿರಿ. 

ಕನ್ಯಾ :- ನೀವು ಹಮ್ಮಿಕೊಳ್ಳಲು ಉದ್ದೇಶಿಸಿರುವ ಕಾರ್ಯಕ್ಕೆ ಬೆಂಬಲ ದೊರೆಯುವುದು. ಈ ಬಗ್ಗೆ ವಿರೋಧಿಗಳ ಸಹಕಾರ ಪಡೆದಲ್ಲಿಕಾರ್ಯಕ್ರಮ ಯಶಸ್ಸಿನತ್ತ ಸಾಗುವುದು. ವಿಷ್ಣುವಿನ ವಾರವಾದ ಇಂದು ತಪ್ಪದೇ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. 

ತುಲಾ :- ಕೆಲವೊಂದು ತಪ್ಪು ನಿರ್ಧಾರಗಳಿಂದ ನಿಮ್ಮ ಕುಟುಂಬದ ಸದಸ್ಯರೇ ನಿಮ್ಮ ಮೇಲೆ ಅಪನಂಬಿಕೆ ಇಟ್ಟುಕೊಳ್ಳುವರು. ಅವರಿಗೆ ನಿಜಸ್ಥಿತಿ ತಿಳಿಸಿ. ನಿಮ್ಮ ಮೇಲಿದ್ದ ಅನುಮಾನಗಳು ಮಂಜಿನಂತೆ ಕರಗಿ ನೀರಾಗುವುದು. 

ವೃಶ್ಚಿಕ :- ಸ್ನೇಹಿತರು, ಬಂಧುಗಳು ನಿಮಗೆ ಸಹಾಯ ಹಸ್ತ ನೀಡುವರು. ಗೆಳೆಯರ ಮೂಲಕ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಹಣಕಾಸಿನ ಪರಿಸ್ಥಿತಿ ಸುಧಾರಣೆಗೊಳ್ಳುವುದು. 

ಧನುಸ್ಸು :- ನಿಸ್ಪೃಹತೆಯಿಂದ ಕೆಲಸ ಮಾಡುವ ವ್ಯಕ್ತಿಗೆ ಕೆಲಸ ಕಾರ್ಯದಲ್ಲಿಒತ್ತಡಗಳು ಜಾಸ್ತಿ. ಹಾಗಾಗಿ ಒತ್ತಡಗಳು ಜಾಸ್ತಿ ಎಂದು ಎಲ್ಲರ ಮೇಲೆ ರೇಗುವುದು ತರವಲ್ಲ. ಇದರಿಂದ ಕೆಲವು ಕೆಲಸಗಳಿಗೆ ಚ್ಯುತಿ ಬರುವ ಸಂದರ್ಭವಿರುತ್ತದೆ. 

ಮಕರ :- ನಿಮ್ಮ ಆಸಕ್ತಿ ಹಾಗೂ ನಿರಾಸಕ್ತಿಗಳನ್ನು ವಿವಿಧ ವಿಧವಾಗಿ ಬದಲಾಯಿಸಲು ಹೋಗದಿರಿ. ಗುರುವಿನ ಕಾರುಣ್ಯದಿಂದ ಎಲ್ಲವೂ ಒಳಿತಾಗುವುದು. ಆದರೆ ಸಾಡೇಸಾತ್‌ ಶನಿ ಪ್ರಭಾವದಿಂದ ಕೆಲ ಕಾರ್ಯಗಳಲ್ಲಿಹಿನ್ನೆಡೆ ಕಂಡು ಬರುವ ಸಾಧ್ಯತೆ ಇದೆ. 

ಕುಂಭ :- ಸಂಕಟದ ಸಮಯದಲ್ಲೂಧೈರ್ಯಗೆಡದೆ ಸಂತಸದ ಮನೋಬಲದಿಂದ ಮುಂದುವರಿಯಿರಿ ಗೆಲುವು ನಿಮ್ಮದಾಗುವುದು. ಜೀವನದಲ್ಲಿಹೊಸತನ ಕಾಣುವಿರಿ. ಹೊಸ ಗೆಳೆಯರ ಪರಿಚಯವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. 

ಮೀನ :- ಮನೆಕಟ್ಟುವ ವಿಚಾರದಲ್ಲಿಅನಗತ್ಯ ವಿಳಂಬಗಳು ಕಾಡುವ ಸಾಧ್ಯತೆ ಇದೆ. ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆಯಿಂದ ಒಳಿತಾಗುವುದು. ಜಾಗ ಖರೀದಿ ವಿಚಾರದಲ್ಲಿದಾಖಲೆ ಪತ್ರಗಳನ್ನು ಅಮೂಲಾಗ್ರವಾಗಿ ಪರಾಂಬರಿಸಿ. ಒಳಿತಾಗುವುದು. 

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.