vijaya times advertisements
Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 7,2019- ಶನಿವಾರ

images

ಮೇಷ :- ನಿಮ್ಮದು ಕೇವಲ ಪ್ರದರ್ಶನದ ಚಟುವಟಿಕೆಗಳು ಎಂಬ ಟೀಕೆಗೆ ಗುರಿಯಾಗದಂತೆ ಕ್ರಿಯಾಶೀಲರಾಗಿ. ಇದರಿಂದ ಒಳಿತಿಗೆ ದಾರಿ ಇದೆ. ಸಹೋದರರ ಸಂಗಡ ಸಂಘರ್ಷ ಬೇಡ. ಕೆಲಸ ಕಾರ್ಯಗಳು ಮಂದಗತಿಯಲ್ಲಿಸಾಗುವುದು.

ವೃಷಭ :- ವಿಶೇಷವಾದ ಸಂತೋಷ ಹಾಗೂ ಲವಲವಿಕೆಯಿಂದ ಕೈಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ. ಹಳೆಯ ಕಾಯಿಲೆಯೊಂದು ಮರುಕಳಿಸುವ ಸಾಧ್ಯತೆ ಇದೆ. ದೇವ ಧನ್ವಂತರಿಯನ್ನು ಆರಾಧಿಧಿಸಿ, ಅರ್ಚಿಸಿ. ಉತ್ತಮ ಆರೋಗ್ಯವನ್ನು ಹೊಂದಿ.

ಮಿಥುನ :- ಯಾವುದೇ ಸಂದರ್ಭದಲ್ಲೂಹಿಂದುಮುಂದು ಯೋಚನೆ ಮಾಡದೆ ಕೆಲಸವನ್ನು ಒಪ್ಪಿಕೊಳ್ಳದಿರಿ. ಮಾಯಕಾರಕ ರಾಹು ಜನ್ಮಸ್ಥಾನದಲ್ಲಿದ್ದು, ಕೆಲವು ಮಾಯಾಲೋಕಗಳನ್ನು ಸೃಷ್ಟಿಸಿರುವನು. ರಾಹುವಿನ ಮಂತ್ರ ಜಪಿಸಿ.

ಕಟಕ :- ಒಬ್ಬ ವ್ಯಕ್ತಿ ನೇಪಥ್ಯದಲ್ಲಿ ಕುಳಿತು ನಿಮ್ಮ ವಿರುದ್ಧ ನಿಮ್ಮ ವಿರೋಧಿಧಿಗಳಿಂದ ಆಟವನ್ನು ಆಡಿಸುವನು. ಜಯವಿರುವವರೆಗೂ ಭಯವಿಲ್ಲ. ಹಾಗಾಗಿ ನೀವು ಯಾವುದಕ್ಕೂ ಅಂಜದೆ ಇರುವುದು ಒಳ್ಳೆಯದು.

ಸಿಂಹ :- ದೇವ ಮಾರುತಿಯನ್ನು ಧ್ಯಾನಿಸುವ ಮೂಲಕ ಇಷ್ಟಾರ್ಥಗಳನ್ನು ಹೊಂದುವಿರಿ. ವಿನಾಕಾರಣ ಬಂದೋದಗಿದ ಅಪವಾದದಿಂದ ಪಾರಾಗುವಿರಿ. ಮಡದಿ, ಮಕ್ಕಳು ನಿಮ್ಮ ಕೆಲಸ ಕಾರ್ಯಗಳಲ್ಲಿಸಹಾಯ ಮಾಡುವರು.

ಕನ್ಯಾ :- ಕಳೆದುಹೋದ ಕಾಗದಪತ್ರಗಳನ್ನು ಮತ್ತು ವಸ್ತುಗಳನ್ನು ಹುಡುಕಲು ಹರಸಾಹಸ ಮಾಡಬೇಕಾಗುವುದು. ದೈವದ ಅನುಕೂಲದಿಂದ ಕಳೆದು ಹೋದ ವಸ್ತು ಲಭ್ಯವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ತುಲಾ :- ಆಂಜನೇಯ ಸ್ವಾಮಿಯನ್ನು ಆರಾಧಿಸುವ ಮೂಲಕ ದಿವ್ಯಶಕ್ತಿಗೆ ಶರಣಾಗುವುದರಿಂದ ಕಾರ್ಯದಲ್ಲಿಸಾಫಲ್ಯ ಹೊಂದುವಿರಿ. ನೂತನ ಗೃಹ ನಿರ್ಮಾಣ ಕಾರ್ಯವು ಬಹುಜಾಗ್ರತೆಯಾಗಿ ಮುಗಿಯುವುದು. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.

ವೃಶ್ಚಿಕ :- ಎಷ್ಟೇ ಯೋಜನೆ ಮಾಡಿ ತರ್ಕಬದ್ಧವಾಗಿಯೇ ನಿರ್ಧರಿಸಿದ ವಿಚಾರಗಳು ನಿಮಗೆ ತಲೆನೋವು ತರಿಸುವವು. ನಿಮ್ಮ ಈಗಿನ ಪರಿಸ್ಥಿತಿಯನ್ನು ಅರಿತ ಸ್ನೇಹಿತರೇ ನಿಮ್ಮ ತೇಜೋವಧೆ ಮಾಡುತ್ತಲಿರುವರು. ಶಿವನ ಧ್ಯಾನ ಮಾಡಿ.

ಧನುಸ್ಸು :- ನಿಮ್ಮ ದಾರಿಯಲ್ಲಿಯಾವಾಗಲೂ ವಿಘ್ನಗಳೇ ತುಂಬಿವೆ ಎಂಬ ಅಧೈರ್ಯ ಬೇಡ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಇದರಿಂದ ಮನಸ್ಸಿಗೆ ಮುದ ಸಿಗುವುದು.

ಮಕರ :– ಆಶ್ಚರ್ಯವೆಂಬಂತೆ ಕಗ್ಗಾಂಟಾಗಿ ಹೋಗಿದ್ದ ವಿಚಾರಗಳು ಅತ್ಯಂತ ಸುಲಲಿತವಾಗಿ ನಿವಾರಣೆಯಾಗಲಿವೆ. ಇದರಿಂದ ನಿಮಗೆ ಸಂತೋಷ, ಸಂಭ್ರಮ ಮನೆ ಮಾಡುವುದು. ಪ್ರಯಾಣದಲ್ಲಿ ಲಕ್ಷ್ಮೀನರಸಿಂಹನನ್ನು ಆರಾಧಿಸಿ.

ಕುಂಭ :- ಮುನಿಸಿಕೊಂಡು ದೂರ ಹೋಗಿರುವ ನಿಮ್ಮ ವಿರೋಧಿಗಳು, ಸ್ನೇಹಿತರು ನಿಮ್ಮ ಹಿಂದೆ ಬರುವ ಸಾಧ್ಯತೆ ಇದೆ. ಆದರೆ ಅವರನ್ನು ಎಷ್ಟು ಬೇಕೋ ಅಷ್ಟಕ್ಕೆ ಸೀಮಿತಗೊಳಿಸಿ ಸ್ನೇಹವನ್ನು ಮುಂದುವರಿಸಿ.

ಮೀನ :- ಪಿತೃವರ್ಗದವರಿಂದ ಆರ್ಥಿಕ ಸಹಾಯ ದೊರೆಯುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಲ್ಪ ಹಿನ್ನಡೆಯುಂಟಾಗುವುದು. ಭಗವಂತನ ದಯೆಯಿಂದ ಎಲ್ಲವೂ ಸುಗಮವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

Latest News

ರಾಜಕೀಯ

“ಸಂಸತ್ತಿನಲ್ಲಿ ನನಗೆ ಕಹಿ ಅನುಭವಗಳಾಗಿವೆ” :  ಎಚ್.ಡಿ.ದೇವೇಗೌಡರ

ಆಯಾ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸಂಸದರಿಗೆ ನೀಡಿದ ಸಮಯವನ್ನು ಮರುಪರಿಶೀಲಿಸಬೇಕು” ಎಂದು ರಾಜ್ಯಸಭೆ ಮತ್ತು ಲೋಕಸಭೆಯ ಸ್ಪೀಕರ್‌ಗಳನ್ನು ದೇವೇಗೌಡರು  ಒತ್ತಾಯಿಸಿದರು.

ದೇಶ-ವಿದೇಶ

BJP ಹಾರ್ದಿಕ್‌ಪಟೇಲ್‌ಗೆ ಜಯ, ಕಾಂಗ್ರೆಸ್‌ನ  ಜಿಗ್ನೇಶ್‌ಮೆವಾನಿಗೆ ಸೋಲು ; BJP ಪ್ರಚಂಡ ಗೆಲುವಿಗೆ ಕಾರಣ?

ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಒಟ್ಟಾರೆಯಾಗಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣ

ದೇಶ-ವಿದೇಶ

ಗುಜರಾತ್‌ನಲ್ಲಿ ದಾಖಲೆಯತ್ತ ಬಿಜೆಪಿ, ಹಿಮಾಚಲದಲ್ಲಿ ಬಿಜೆಪಿ – ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.