ಪ್ರಸಕ್ತ ಸನ್ನಿವೇಶವನ್ನು ಹಿನ್ನೆಲೆಯಾಗಿಟ್ಟುಕೊಂಡು , ಅಮರನಾಥ ದೇವಾಲಯ ಮಂಡಳಿಯು ಈ ವರ್ಷದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ 2020 ರ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿ ಮಂಡಳಿ ಆದೇಶ ಹೊರಡಿಸಿದೆ. ಯಾತ್ರೆ ರದ್ದತಿಯನ್ನು ಘೋಷಿಸಲು ಮಂಡಳಿ ವಿಷಾದ ವ್ಯಕ್ತಪಡಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ರಾಜಭವನ ಹೇಳಿದೆ.
ಧಾರ್ಮಿಕ ಭಾವನೆಗಳ ಘಾಸಿಯಾಗದಂತೆ ಮಂಡಳಿ ಬೆಳಿಗ್ಗೆ ಮತ್ತು ಸಂಜೆ ಆರತಿಯ ನೇರ ಪ್ರಸಾರ / ವರ್ಚುವಲ್ ದರ್ಶನವನ್ನು ಮುಂದುವರಿಸಲಿದೆ. ಈ ಹಿಂದೆ ನಡೆಸಿದ್ದಂತೆಯೇ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಲಾಗುತ್ತದೆ. ಖಾದಿ ಮುಬಾರಕ್ ಅವರಿಗೆ ಸರ್ಕಾರದಿಂದ ಅನುಕೂಲವಾಗಲಿದೆ ಎಂದು ರಾಜಭವನ ಹೇಳಿದೆ.
ಜುಲೈ 21 ರಂದು ಅಮರನಾಥ ಯಾತ್ರೆ ಆರಂಭವಾಗಲಿದೆ ಎಂದು ಕಳೆದ ಮಾಸದಲ್ಲಿ ಹೇಳಲಾಗಿತ್ತು. ಅಲ್ಲದೆ ಈ ಬಾರಿ ಕೇವಲ ಹದಿನೈದು ದಿನ ಮಾತ್ರ ಯಾತ್ರೆ ನಡೆಯಲಿದೆ ಎನ್ನಲಾಗಿತ್ತು, ಆದರೆ ಇದೀಗ ಯಾತ್ರೆ ರದ್ದಾಗಿದ್ದು ಭಕ್ತರು ಮನದಲ್ಲೇ ಅಮರನಾಥನನ್ನು ಸ್ಮರಿಸಬೇಕಾಗಿದೆ.