ನವದೆಹಲಿ. ಅ. 15: ಮುಂದಿನ ದಿನಗಳಲ್ಲಿ ಎಲ್ಲ ಸಚಿವಾಲಯಗಳು, ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ (ಪಿಎಸ್ಯುು) ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ದೂರಸಂಪರ್ಕ ಸೇವೆ ಬಳಸುವಂತೆ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಸ್ಥಿರ ದೂರವಾಣಿ ಸೇರಿದಂತೆ ಎಲ್ಲ ಟೆಲಿಕಾಂ ಸೇವೆಯನ್ನೂ ಇದೇ ಸಂಸ್ಥೆಗಳಿಂದ ಪಡೆಯುವಂತೆ ಎಲ್ಲ ಸಚಿವಾಲಯಗಳಿಗೆ ಪತ್ರ ರವಾನಿಸಲಾಗಿದೆ.
ಬಿಎಸ್‌ಎನ್‌ಎಲ್ ಕಳೆದ ಕೆಲ ವರ್ಷಗಳಿಂದ ಜೀಯೋ ಮತ್ತಿತರ ಟೆಲಿಕಾಂ ಸಂಸ್ಥೆಗಳ ಅಬ್ಬರದಿಂದ ಭಾರಿ ನಷ್ಟ ಅನುಭವಿಸುತ್ತಿದೆ. ಹಾಗಾಗಿ ಈ ಸಂಸ್ಥೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಮಹತ್ತ್ವದ ನಿರ್ಧಾರ ತೆಗೆದುಕೊಂಡಿದೆ. ದುಸ್ಥತಿಯಲ್ಲಿದ್ದ, ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್ಎಲ್ ಕಂಪೆನಿಗಳಿಗೆ ಸರ್ಕಾರದ ಈ ಹೊಸ ಆದೇಶವು ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗಿದೆ. ಏಕೆಂದರೆ, 2008ರಲ್ಲಿ 80 ಕೋಟಿಯಿದ್ದ ಚಂದಾದಾರರ ಸಂಖ್ಯೆ 2020ರ ಸುಮಾರಿಗೆ 80 ಲಕ್ಷಕ್ಕೆ ಇಳಿದಿದೆ. 2019-20ರಲ್ಲಿ ಬಿಎಸ್ಎನ್ಎಲ್ ಬರೋಬ್ಬರಿ 15,500 ಕೋಟಿ ರೂ. ನಷ್ಟ ಅನುಭವಿಸಿದೆ. ಇನ್ನು ಎಂಟಿಎನ್ಎಲ್ 2008ರಲ್ಲಿ 35.4 ಲಕ್ಷ ಚಂದಾದಾರರನ್ನು ಹೊಂದಿದ್ದು, ಸಧ್ಯ 30.7 ಲಕ್ಷಕ್ಕೆ ಇಳಿದಿದೆ.