Visit Channel

ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ

933660-879008-cylinder-price-hike

ಬೆಂಗಳೂರು: ದೇಶದ ಜನರಿಗೆ ಭಾರತೀಯ ತೈಲ ನಿಗಮವು ಸಿಹಿಸುದ್ದಿಯನ್ನು ನೀಡಿದೆ.  ಇನ್ನು ಮುಂದೆ ದೇಶಾದ್ಯಂತ ಇಂಡೇನ್‌ ಅಡುಗೆ ಅನಿಲ ಮರುಪೂರಣ ಸಿಲಿಂಡರ್‌ ಬುಕಿಂಗ್‌ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ. ಗ್ರಾಹಕರಿಗೆ 24-7 ಸೇವೆಯನ್ನು ನೀಡುವ ಎಲ್‌ಪಿಜಿ ಸಿಲಿಂಡರ್‌ ಬುಕಿಂಗ್‌ ಸಂಖ್ಯೆ 7718955555 ಆಗಿದೆ ಎಂದು ಭಾರತೀಯ ತೈಲ ನಿಗಮದ ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರ ಮಟ್ಟದಲ್ಲಿ ಎಲ್‌ಪಿಜಿ ಬುಕ್ಕಿಂಗ್‌ ಅನ್ನು ಒಂದೇ ಸಂಖ್ಯೆಯಲ್ಲಿ ಎಸ್‌ಎಂಎಸ್‌ ಮತ್ತು ಐವಿಆರ್‌ಎಸ್‌ ಮೂಲಕ ಮಾಡಬಹುದಾಗಿದ್ದು, ಇದು ಇಂಡೇನ್‌ ಎಲ್‌ಪಿಜಿ ಮರುಪೂರಣ ಸಿಲಿಂಡರ್‌ ಬುಕ್‌ ಮಾಡುವ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಮಹತ್ವದ ಕ್ರಮವಾಗಿದೆ.

ಶನಿವಾರ ಮಧ್ಯರಾತ್ರಿಯಿಂದ ಎಎಲ್‌ಪಿಜಿ ಸಿಲಿಂಡರ್‌ ಬುಕ್ಕಿಂಗ್‌ನ ಸಮಾನ ಸಂಖ್ಯೆ ಅಂದರೆ 7718955555 ಜಾರಿಗೆ ಬರುತ್ತದೆ ಎಂದು ತಿಳಿಸಿದೆ. ಇಂಡೇನ್‌ ಎಲ್‌ಪಿಜಿ ಸಿಲಿಂಡರ್‌ ಬುಕ್ಕಿಂಗ್‌ ಅನ್ನು ಗ್ರಾಹಕರ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ ಮಾತ್ರವೇ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.