ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಇತ್ತೀಚೆಗಷ್ಟೇ ಪೂರ್ಣ ಗೊಂಡಿದ್ದು ;ಎಸ್ ಎಸ್ ಎಲ್ ಸಿ ಪರೀಕ್ಷೆ ಯನ್ನು ಸರ್ಕಾರ ಜುಲೈ ೪ ರವರೆಗೆ ನಡೆಯಲಿದೆ . ಇತ್ತ ಕೊರೋನಾದ ನಡುವೆ ಪರೀಕ್ಷೆ ನಡೆಸುತ್ತಿರುವುದಕ್ಕೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ. ಆದ್ರೆ ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆಯ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದಾರೆ.
ಜುಲೈ ಕೊನೆಯ ವಾರದೊಳಗೆ ಈಗಾಗಲೇ ಪೂರ್ಣಗೊಂಡ ಪಿಯುಸಿ ಫಲಿತಾಂಶ ಪ್ರಕಟಗೊಳ್ಳುತ್ತದೆ ಹಾಗು ಈಗ ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್ ಮೊದಲನೇ ವಾರದಲ್ಲಿ ಪ್ರಕಟಗೊಳ್ಳಲಿದೆ. ಈ ಕುರಿತು ಮಾತನಾಡಿದ ಶಿಕ್ಷಣ ಸಚಿವರು ಶಾಲೆಗಳ ಆರಂಭದ ಬಗ್ಗೆ ಇನ್ನು ಸರ್ಕಾರ ತೀರ್ಮಾನ ನಡೆಸಿಲ್ಲ ಆದರೆ ಯಾವುದೇ ಶಾಲೆಗಳು ಈ ವರ್ಷ ಶುಲ್ಕ ಹೆಚ್ಚಿಸುವಂತಿಲ್ಲ ಎಂದು ಶಾಲೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.