ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ 63 ವರ್ಷದ ನಾಗಕೃಷ್ಣ ರಾಜೆ ಅರಸ್ ಹಾಗೂ ಅವರ ಪುತ್ರ ಪ್ರಮು ಕುಮಾರ್ ರಾಜೆ ಅರಸ್ ಅವರು ಒಟ್ಟಿಗೆ ಪಿ.ಹೆಚ್.ಡಿ ಪದವಿಯನ್ನು ಪಡೆಯಲಿದ್ದಾರೆ. ಈ ಅಪ್ಪ- ಮಗ ಮೈಸೂರು ವಿವಿಯ ಮೂರನೇ ವರ್ಷದ ಘಟಿಕೋತ್ಸವದಲ್ಲಿ ಒಂದೇ ವೇದಿಕೆಯಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆಯಲಿದ್ದಾರೆ. ಇಂತಹದೊಂದು ಅಪರೂಪದ ದೃಶ್ಯಕ್ಕೆ ಮೈಸೂರು ವಿ ವಿ ಯು ಸಾಕ್ಷಿಯಾಗಲಿದೆ.
ಅಪ್ಪ – ಮಗ ಇಬ್ಬರೂ ಡಾ.ವಿ.ಎಸ್. ಸೋಮನಾಥ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಮಗನ ಸ್ಪೂರ್ತಿಯಿಂದ ತಂದೆಯೂ ಓದು ಮುಗಿಸಿದ್ದು ನಿಜಕ್ಕೂ ಇದು ಸಮಾಜಕ್ಕೆ ಮಾದರಿ ವಿಷಯವಾಗಿದೆ. ಕಲಿಯುವ ಆಸಕ್ತಿಯಿದ್ದರೆ ಅಲ್ಲಿ ವಯಸ್ಸಿನ ಪ್ರಶ್ನೆ ಎದುರಾಗುವುದಿಲ್ಲ ಎಂದು ನಾಗಕೃಷ್ಣ ರಾಜೆ ಅರಸ್ ಅವರು ತೋರಿಸಿ ಕೊಟ್ಟಿದ್ದಾರೆ.
ಅನೇಕ ಜನ ಇತರರಿಂದ ಅಥವಾ ತಂದೆ ತಾಯಿಯಿಂದ ಸ್ಪೂರ್ತಿ ಪಡೆದುಕೊಂಡು ಸಾಧನೆ ಮಾಡುತ್ತಾರೆ. ಆದರೆ ಇಲ್ಲಿ ಮಗನಿಂದಲೇ ತಂದೆ ಸ್ಪೂರ್ತಿ ಪಡೆದಿರುವುದು ವಿಶೇಷವಾಗಿದೆ. ಇದೊಂದು ಅಪರೂಪದ ಕ್ಷಣವಾಗಲಿದೆ.