New Delhi : ರಾಷ್ಟ್ರೀಯ ಕುಸ್ತಿ (National Wrestling) ತಂಡದ ಆಯ್ಕೆಗಾಗಿ ನಡೆದ ಸಂದರ್ಭದಲ್ಲಿ ರಕ್ತ ಹಾಗೂ ಮೂತ್ರದ ಮಾದರಿಯನ್ನು (Blood and urine samples) ಸಲ್ಲಿಸಲು ನಿರಾಕರಿಸಿದ್ದಕ್ಕಾಗಿ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಸಂಸ್ಥೆ (NADA) ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ನಾಲ್ಕು ವರ್ಷಗಳ ಕಾಲ ಅಮಾನತುಗೊಳಿಸಿದೆ.
ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಸಂಸ್ಥೆ (NADA) ಮೂತ್ರ ಮಾದರಿಯನ್ನು ಯಾಕೆ ನೀಡಿಲ್ಲ ಎಂದು ಜೂನ್ 23 ರಂದು ಬಜರಂಗ್ ಪೂನಿಯಾಗೆ ನೋಟಿಸ್ (Notice to Bajrang Punia) ನೀಡಿತ್ತು. ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4 ರಂದು ವಿಚಾರಣೆಯನ್ನು ಕೂಡಾ ನಡೆಸಲಾಗಿತ್ತು. ಕಲಂ 10.3.1 ರ ಅಡಿಯಲ್ಲಿ ನಿರ್ಬಂಧಗಳಿಗೆ ಕ್ರೀಡಾಪಟು (Sportsman) ಹೊಣೆಗಾರನಾಗಿರುತ್ತಾನೆ ಮತ್ತು 4 ವರ್ಷಗಳ ಅವಧಿಗೆ ಅನರ್ಹತೆಗೆ ಗುರಿಯಾಗುತ್ತಾನೆ (Subject to disqualification) ಎಂದು ನಾಡಾ ಹೇಳಿದೆ. ಅಮಾನತಿಯಲ್ಲಿರುವಾಗ ಬಜರಂಗ್ ಪೂನಿಯಾ ವಿದೇಶದಲ್ಲಿ ಕೋಚಿಂಗ್ ಕೆಲಸಕ್ಕೆ ಅರ್ಜಿ (Apply for a job) ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ನಾಡಾ ತನ್ನ ಆದೇಶದಲ್ಲಿ ತಿಳಿದಿದೆ.
ಮೂತ್ರ ಮತ್ತು ರಕ್ತದ ಮಾದರಿಯನ್ನು (Urine and blood sample) ನೀಡಲು ನಾನು ನಿರಾಕರಿಸಿರಲಿಲ್ಲ. ಆದರೆ ಅವಧಿ ಮೀರಿದ ಕಿಟ್ಗಳ ಬಳಕೆಗೆ ಸಂಬಂಧಿಸಿದಂತೆ NADA ಆಕ್ಷೇಪ ಸಲ್ಲಿಸಿದ್ದೆ ಎಂದು ಪೂನಿಯಾ (Punia) ಹೇಳಿದ್ದಾರೆ. ಆದರೆ ಚಾಪೆರೋನ್/ಡಿಸಿಒ ಬಜರಂಗ್ (Chaperone/DCO Bajrang) ಅವರನ್ನು ಸರಿಯಾಗಿ ಸಂಪರ್ಕಿಸಿದ್ದಾರೆ ಮತ್ತು ಡೋಪಿಂಗ್ ವಿಶ್ಲೇಷಣೆಗಾಗಿ ಮೂತ್ರದ ಮಾದರಿಯನ್ನು ಒದಗಿಸುವ ಅಗತ್ಯತೆಯ ಬಗ್ಗೆ ತಿಳಿಸಲಾಗಿದೆ ಎಂದು ಹೇಳುವ ಮೂಲಕ NADA ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಇತ್ತೀಚೆಗೆ ಕುಸ್ತಿಪಟು ವಿನೇಶ್ ಫೋಗಟ್ (Wrestler Vinesh Phogat) ಅವರೊಂದಿಗೆ ಕಾಂಗ್ರೆಸ್ಗೆ (Congress) ಸೇರ್ಪಡೆಗೊಂಡ ಭಜರಂಗ್, ಅಖಿಲ ಭಾರತ ಕಿಸಾನ್ ಕಾಂಗ್ರೆಸ್ನ ನಾಯಕತ್ವವನ್ನು ವಹಿಸಿಕೊಂಡಿದ್ದರು. ಬಿಜೆಪಿ (BJP) ಸಂಸದನ ವಿರುದ್ದ ನಡೆದ ಹೋರಾಟದ ಭಾಗವಾಗಿದ್ದರು. ಕಳೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ (Assembly elections) ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರವನ್ನು ನಡೆಸಿದ್ದರು. ಇನ್ನು ಕುಸ್ತಿಪಟು ವಿನೇಶ್ ಫೋಗಟ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.