ಇತ್ತೀಚೆಗೆ ನೇಪಾಳದ ಪ್ರಧಾನ ಮಂತ್ರಿ ಕೆ.ಪಿ ಶರ್ಮ ಓಲಿ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಭಾರತ ಹುನ್ನಾರ ಮಾಡಿದೆ ಎಂದು ಆರೋಪ ಮಾಡಿದ್ದರು. ಈ ಆರೋಪಕ್ಕೆ ನೀಡಬೇಕು ಇಲ್ಲದಿದ್ದರೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ನೇಪಾಳದ ಕಮ್ಯುನಿಷ್ಟ್ ಪಕ್ಷ ಓಲಿ ಅವರಿಗೆ ಕಟ್ಟಿನಿಟ್ಟಿನ ಆದೇಶ ನೀಡಿದೆ. ಈ ಬೆನ್ನಲ್ಲೆ ಓಲಿಯವರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತು ಚೀನಾ ಅಧ್ಯಕ್ಷ ಜಿನ್‍ಪಿಂಗ್ ಬೆಂಬಲ ನೀಡಲು ಮುಂದಾಗಿದ್ದಾರೆ.
ಶನಿವಾರ ನಡೆದ ನೇಪಾಳ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ಕೆ.ಪಿ. ಶರ್ಮ ಓಲಿಯವರು ತಮ್ಮ ಪದಚ್ಯುತಗೊಳಿಸಲು ಭಾರತ ಹುನ್ನಾರ ಮಾಡಿದೆ ಎಂದು ಆರೋಪ ಮಾಡಿದ್ದರು. ಲಿಂಪಿಯಾಧುರಾ,ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶಗಳಿಗೆ ಪರಿಷ್ಕøತ ನಕ್ಷೆ ರೂಪಿಸಿದ್ದಕ್ಕಾಗಿ ಭಾರತ ತಮ್ಮ ಪ್ರಧಾನಿ ಹುದ್ದೆಯಿಂದ ಇಳಿಸಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಸರಿಯಾದ ಸಾಕ್ಷಿ ನೀಡಬೇಕು ಎಂದು ಪಕ್ಷದ ಮುಖಂಡರು ತಾಕೀತು ಮಾಡಿದ್ದಾರೆ.
ಇನ್ನೂ ಈ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮುಮದಾಗಿದ್ದಾರೆ. ನೇಪಾಳದ ಪ್ರಧಾನಿಯೊಂದಿಗೆ ಮಾತನಾಡುವುದಿದೆ. ಇದಕ್ಕಾಗಿ ದೂರವಾಣಿ ಕರೆ ಮಾಡಲು ಸೂಕ್ತ ಸಮಯವನ್ನು ನಿಗದಿ ಮಾಡಿಕೊಡುವಂತೆ ನೇಪಾಳದ ವಿದೇಶಾಂಗ ಸಚಿವಾಲಯಕ್ಕೆ ಪಾಕ್ ಪ್ರಧಾನಿ ಸಂದೇಶ ರವಾನಿಸಿದ್ದಾರೆ. ಮತ್ತು ಆದಷ್ಟೂ ಗುರುವಾರ ಮಧ್ಯಾಹ್ನ 12.30ಕ್ಕೆ(ನೇಪಾಳದ ಸಮಯ) ನಿಗದಿ ಮಾಡುವಂತೆ ಸ್ವತಃ ಅವರೇ ಸಮಯವನ್ನೂ ಸೂಚಿಸಿದ್ದಾರೆ.
ಇನ್ನು ಲಡಾಖ್‍ನಲಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಘರ್ಷಣೆಯ ವೇಳೆಯಲ್ಲಿ ನೇಪಾಳ ಮತ್ತು ಪಾಕಿಸ್ತಾನದ ಪ್ರಧಾನಿಗಳ ದೂರವಾಣಿ ಮಾತುಕತೆ ನಡೆಯತ್ತಿರುವುದು ಸರ್ವೇಸಾಮಾನ್ಯವಾದ ವಿಷಯವಾಗಿದೆ.