ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲೊಬ್ಬ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಸಿಎಂ ಜನರಲ್ ಸ್ಟೋರ್ ಅಂಗಡಿಯ ಮಾಲೀಕ, ಎಸ್ ಕೆ ಎಸ್ ಎಸ್ ಎಫ್ ಕಾರ್ಯಕರ್ತ ಶರೀಫ್ ಎಂಬಾತನಿಗೆ ಧರ್ಮದೇಟು ಬಿದ್ದಿದೆ.
ಈತ ಅಂಗಡಿಗೆ ಬರುವ ಹೆಣ್ಣು ಮಕ್ಕಳನ್ನು ಕಾಮದ ಕಣ್ಣಿನಿಂದಲೇ ನೋಡುತ್ತಿದ್ದ. ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆ ಒಂದು ಮನೆಗೆ ನುಗ್ಗಿ ಯಾರೂ ಇಲ್ಲವೆಂದು ತಿಳಿದು ಒಳಗೆ ಹೋಗಿ ಧರ್ಮದೇಟು ತಿಂದಿರುವುದು ಇದೀಗ ಬೆಳಕಿಗೆ ಬಂದಿದೆ. ಹಾಗಾಗಿ ಆ ಪರಿಸರದ ಹೆಣ್ಣು ಮಕ್ಕಳು ಎಚ್ಚರವಹಿಸಬೇಕೆಂದು ಅಲ್ಲಿನ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಇತನ ಕಾಮಾಂಧ ಬುದ್ದಿಯನ್ನ ವೀಡಿಯೋ ಸಮೇತ ವೈರಲ್ ಮಾಡಿದ್ದಾರೆ.
ಅಂಗಡಿಗೆ ಬಂದ ಹೆಣ್ಣು ಮಕ್ಕಳಿಗೆ ಕೆಲಸ ಕೊಡಿಸುವುದಾಗಿ ಹೇಳಿ ಅವರ ಮನಸ್ಸನ್ನು ಕೆಡಿಸಿ ಆಮಿಷಗಳನ್ನು ಒಡ್ಡಿರುವ ಬಗ್ಗೆಯು ಈತನ ಮೇಲೆ ಆರೋಪವಿದೆ. ಹಾಗಾಗಿ ಈತನನ್ನು ಈ ಕೂಡಲೇ ಬಂಧಿಸಬೇಕು ಎಂದು ಅಲ್ಲಿನ ಊರವರು ಒತ್ತಾಯಿಸಿದ್ದಾರೆ.