vijaya times advertisements
Visit Channel

ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸಬೇಡಿ…

Woman has a pain in the eye

ಕತ್ತಲಿನ ಜೀವನ, ಕಣ್ಣುಗಳಿಲ್ಲದ ಬದುಕು ತೀರಾ ಕಷ್ಟಕರ..ಹುಟ್ಟು ಕುರುಡು ಬೇರೆಯದು..ಆದರೆ ನಿರ್ಲಕ್ಷ್ಯದಿಂದ ಕಣ್ಣಿನ ದೃಷ್ಟಿಯ ಮಂದತೆಗೆ ಕಾರಣವಾಗುವುದು, ಕಣ್ಣು ನೋವಿನ ಸಮಸ್ಯೆ ಇತ್ತೀಚೆಗಂತೂ ಎಲ್ಲೆಡೆ ಕಂಡುಬರುವ ವಿಚಾರ.. ಮೊಬೈಲ್ ಹಾಗೂ ಕಂಪ್ಯೂಟರ್ ಗಳ ಅತಿಯಾದ ಬಳಕೆ, ಚಿಕ್ಕ ಅಕ್ಷರಗಳನ್ನು ಒಂದೇ ಸಮನೆ ನೋಡುವುದು, ಅತಿಯಾಗಿ ಕಣ್ಣೀರು ಸುರಿಸುವುದು, ಪೋಷಕಾಂಶಗಳ ಕೊರತೆ ಹೀಗೆ ಅನೇಕ ಕಾರಣಗಳಿಂದ ಕಣ್ಣು ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಕಣ್ಣಿನ ಬಗ್ಗೆ ಅತಿಯಾದ ಕಾಳಜಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

  • ಪುಸ್ತಕ ಓದುವಾಗ, ಕಂಪ್ಯೂಟರ್ ಬಳಕೆ ಮಾಡುವಾಗ, ಟಿವಿ ನೋಡುವಾಗ, ಮೊಬೈಲ್ ಯೂಸ್ ಮಾಡುವ ವೇಳೆ ನಿರ್ದಿಷ್ಟ ಅಂತರ ಹಾಗೂ ಭಂಗಿಯನ್ನು ಅನುಸರಿಸಬೇಕು.
  • ಮಂದ ಬೆಳಕಿನಲ್ಲಿ ನೋಡುವುದಾಗಲೀ, ಓದುವುದಾಗಲೀ ಮಾಡಬಾರದು.
  • ನಿರಂತರ ವೀಕ್ಷಣೆ ಮಾಡುವ ಬದಲು ಕಣ್ಣಿಗೆ ಆಗಾಗ ವಿಶ್ರಾಂತಿ ನೀಡಿ
  • ಬಿಡುವಾದಾಗಲೆಲ್ಲಾ ತಣ್ಣಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿ
  • ಸೊಪ್ಪಿನಲ್ಲಿ ವಿಟಮಿನ್ ಎ ಅಂಶ ಹೆಚ್ಚಿರುವುದರಿಂದ ಆಹಾರದಲ್ಲಿ ಮೆಂತ್ಯ, ಹರಿವೆ, ನುಗ್ಗೆ, ಅಗಸೆ ಹೂ ಇಂತವುಗಳ ಬಳಕೆ ಮಾಡಿ
  • ವಿಟಮಿನ್ ಎ ಅಧಿಕವಿರುವ ಮಾವು ಹಾಗೂ ಪಪ್ಪಾಯ ಹಣ್ಣುಗಳ ಸೇವನೆ ಉತ್ತಮ
  • ಕಣ್ಣು ನೋವಿರುವ ವೇಳೆ ಕನ್ನಡಕ ಧರಿಸುವುದು ಉತ್ತಮ
  • ಕಣ್ಣಿನ ಸಮಸ್ಯೆಯಾದ ಸೂಕ್ತ ಸಮಯಕ್ಕೆ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ

Latest News

ರಾಜ್ಯ

POCSO ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ದಂಡ ವಿಧಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ!

ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ರಾಜ್ಯ

ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ

ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ದೇಶ-ವಿದೇಶ

ಹೃದಯಾಘಾತದಿಂದ ಬಸ್ ಚಾಲಕ ಸಾವು ; ಅನ್ಯ ವಾಹನಗಳಿಗೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು!

ಬಸ್ ಚಾಲಕ ಹಠಾತ್ ಸಾವನ್ನಪ್ಪಿದ ಬೆನ್ನಲ್ಲೇ ಬಸ್ ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ದೃಶ್ಯದಲ್ಲಿ ಕಾಣಬಹುದು.

ಮನರಂಜನೆ

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು?

ತೆಲುಗು ಸಿನಿಮಾದ ಖ್ಯಾತ ಸಿನಿಮಾ ಪತ್ರಕರ್ತ,ಬರಹಗಾರ,ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ (Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.