Visit Channel

ಕತ್ತಲಲ್ಲಿ ಮುಂಬೈ ನಗರ

Mjg2MDQzMA

ಮುಂಬೈ ಅ 12: ವಾಣಿಜ್ಯ ನಗರಿ ಮುಂಬೈ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದೆ. ಇಡೀ ನಗರಾದ್ಯಂತ ತಾಂತ್ರಿ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇವತ್ತು ಮುಂಜಾನೆಯಿಂದಲೇ ವಿದ್ತುತ್‌ ಸರಬರಾಜಿನಲ್ಲಿ ವ್ಯತ್ಯಯ ಆಗಿರೋದ್ರಿಂದ ಜನ ಭಾರೀ ತೊಂದರೆಗೊಳಗಾಗಿದ್ದು, ಅವರು ತಮ್ಮ ದೂರನ್ನು ಟ್ವೀಟ್ ನಲ್ಲಿ  ಹೊರಹಾಕುತ್ತಿದ್ದಾರೆ.

 ಜನರ ಆಕ್ರೋಶಕ್ಕೆ ಟ್ವೀಟ್ ಮೂಲಕವೇ ಉತ್ತರ ನೀಡಿರುವ ಬ್ರಹತ್ ಮುಂಬೈ ವಿದ್ಯುತ್ ಸರಬರರಾಜು ಹಾಗೂ ಸಾರಿಗೆ  (ಬಿಎಸ್ಇಟಿ) ಇಲಾಖೆ ,ವಿದ್ಯುತ್ ಕಡಿತಕ್ಕೆ ಕಾರಣ ತಿಳಿಸಿದೆ. ಟಾಟಾ ಸಂಸ್ಥೆಯಿಂದ ಪೂರೈಕೆ ಆಗುತ್ತಿದ್ದ ವಿದ್ಯುತ್ ಸರಬರಾಜಿನಲ್ಲಿ ವೈಫಲ್ಯವಾಗಿರುವುದರಿಂದ ಸಂಪರ್ಕ ಕಡಿತಗೊಂಡಿದೆ ಎಂದು ಸ್ಪಷ್ಟನೆ ನೀಡಿದೆ.  ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು  ಟ್ವೀಟ್ ಮಾಡಿದೆ ಕ್ಷಮೆ ಕೇಳಿದೆ. 

ಮೆಟ್ರೋಪಾಲಿನ್ ಪ್ರದೇಶ ಹಾಗೂ ಮುಂಬೈ ನ ಉತ್ತರ ಮತ್ತು ದಕ್ಷಿಣ ಕೇಂದ್ರದಲ್ಲಿ ಎಲ್ಲಿಯೂ ವಿದ್ಯುತ್ ಇಲ್ಲ. ಆಸ್ಪತ್ರೆ ಮುಂತಾದ ತುರ್ತು ಸಂದರ್ಭದಲ್ಲಿ ಕರೆಂಟ್ ಇಲ್ಲದೆ ಜನ ಪರದಾಡುವಂತಾಗಿದೆ. ಸ್ಥಳೀಯ ರೈಲು ಹಾಗೂ ಮೆಟ್ರೋ ಸೇವೆಗಳಿಗೂ ಅಡಚಣೆಯಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.