‘ಐ ಲವ್ ಯು’ ಚಿತ್ರದ ಬಳಿಕ ನಿರ್ದೇಶಕ ಆರ್.ಚಂದ್ರು ಮತ್ತು ಉಪ್ಪಿ ದಾದ ಮತ್ತೊಮ್ಮೆ
ಒಂದಾಗಿದ್ದಾರೆ. ಡಾನ್ ಒಬ್ಬನ ಕಥೆಯನ್ನು ಹೇಳಲು ಕಬ್ಜ ಎಂಬ ಸಿನಿಮಾ
ಸಿದ್ಧಪಡಿಸ್ತಿದ್ದಾರೆ. ಇದೊಂದು ಮಾಮೂಲಿ ಸಿನಿಮಾವಾಗಿರದೆ ಕನ್ನಡದ ಪ್ರಕಾಶ್ ರೈ, ತೆಲುಗಿನ ಜಗಪತಿ ಬಾಬು, ಹಿಂದಿಯ ನಾನಾ ಪಾಟೇಕರ್,
ಪ್ರದೀಪ್ ರಾವತ್, ಮನೋಜ್ ಬಾಜ್ಪೇಯಿ, ತಮಿಳಿನ ಸಮುದ್ರಖಣಿ ಮತ್ತು ಜಯಪ್ರಕಾಶ್ ರೆಡ್ಡಿ.. ಹೀಗೆ ವಿವಿಧ
ಭಾಷೆಯ ಏಳು ಮಂದಿ ಖಳನಾಯಕರು ‘ಕಬ್ಜ’ ಚಿತ್ರದಲ್ಲಿ ಮಿಂಚಲಿದ್ದಾರೆ.
ಅಲ್ಲದೆ 500 ಮಂದಿ ಗ್ಯಾಂಗ್ ಸ್ಟಾರ್ ಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ
ಚಿತ್ರತಂಡ ತಿಳಿಸಿದೆ. ‘ಕಬ್ಜ’ ಪ್ಯಾನ್ ಇಂಡಿಯಾ
ಚಿತ್ರವಾಗಲಿದ್ದು, ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿದೆ. ನಾಲ್ಕು ರಾಜ್ಯಗಳಲ್ಲಿ ‘ಕಬ್ಜ’ ಚಿತ್ರೀಕರಣಗೊಳ್ಳಲಿದೆ.
ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ‘ಕಬ್ಜ’ ಹೊಸ ರೆಕಾರ್ಡ್ ಮಾಡಲು ರೆಡಿ ಆಗಿದೆ.ನವೆಂಬರ್
15 ರಿಂದ ‘ಕಬ್ಜ’ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಮುಂಬೈ, ಕಲ್ಕತ್ತ, ಹೈದರಾಬಾದ್, ಮದುರೈ, ಮಂಗಳೂರಿನಲ್ಲಿ
ಶೂಟಿಂಗ್ ಶೆಡ್ಯೂಲ್ ಇರಲಿದೆ. ಚಿತ್ರದ ನಾಯಕಿ ಉಳಿದ ತಾರಾ ಬಳಗದ ಬಗ್ಗೆ ಯಾವುದೇ ಮಾಹಿತಿಯನ್ನು
ಚಿತ್ರತಂಡ ಬಿಟ್ಟುಕೊಟ್ಟಿಲ್ಲ.