ಕೋವಿಡ್ ೧೯ ಅಟ್ಟಹಾಸ ನಿಲ್ಲೋ ಲಕ್ಷಣಗಳು ಕಾಣ್ತಾಇಲ್ಲ.. ಸೋಂಕಿತರ ಸಂಖ್ಯೆ ವಿಪರೀತ ಏರಿಕೆ ಕಾಣೋದರ ಜೊತೆಗೆ ಸಾವಿನ ಸಂಖ್ಯೆಯೂ ಜಾಸ್ತಿಯಾಗ್ತಾ ಇದೆ. ಇದೆಲ್ಲದರ ನಡುವೆ ಕಮ್ಯುನಿಟಿ ಸ್ಪ್ರೆಡ್ ಕರಾಳ ಮುಖ ಬಯಲಾಗಿದೆ.
ಇದನ್ನು ಸರ್ಕಾರ ಒಪ್ಪಿಕೊಳ್ಳದಿದ್ದರೂ ಸಮುದಾಯದಲ್ಲಿ ಕೊರೋನಾ ಹರಡಿರೋದು ಖಚಿತವಾಗಿದೆ.ಅಂದಹಾಗೆ ಸೋಂಕಿನ ಮೂಲ ತಿಳಿಯದೇ ಇರುವುದೇ ಕಮ್ಯುನಿಟಿಸ್ಪ್ರೆಡ್ ನ ಲಕ್ಷಣವಾಗಿದೆ. ಮನೆಯಲ್ಲೇ ಇದ್ದು , ಎಲ್ಲಾ ಮುನ್ನಚ್ಚರಿಕೆಯನ್ನು ತೆಗೆದುಕೊಂಡರೂ ಸೋಂಕು ಕಾಣಿಸಿಕೊಳ್ತಾ ಇರೋದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ ಈ ವರೆಗೆ ೨೩೪೭೪ ಸೋಂಕಿತರ ಸಂಖ್ಯೆ ದಾಖಲಾಗಿದ್ದು ಇದರಲ್ಲಿ ೯೩೫೨ ರೋಗಲಕ್ಷಣ ಇಲ್ಲದವರು ಸಂಖ್ಯೆ ದಾಖಲಾಗಿದೆ.. ಇನ್ನುಳಿದಂತೆ ೪೨೯೩ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ. ಅಂತರ್ ರಾಜ್ಯ ಅಥವಾ ಜಿಲ್ಲೆಯ ಪ್ರಯಾಣದ ಹಿನ್ನಲೆಯುಳ್ಳವರು ೬೯೦೩ ಜನರು ಇದ್ದಾರೆಂದು ತಿಳಿದಿದೆ.ಅಂತರಾಷ್ಟ್ರೀಯ ಪ್ರಯಾಣ ಹಿನ್ನಲೆ ಇರುವವರು ೫೭೭ ಜನ್ರಿದ್ದು ಐಎಲ್ ಐ ೧೯೦೦ ಸೋಂಕಿತರಿದ್ದಾರೆ.. ಸಾರಿ ಸೋಂಕಿತರು ೪೪೯ ಜನರಿದ್ದಾರೆ ಅನ್ನೋದು ದಾಖಲಾಗಿದೆ . ಆದ್ರೆ ರಾಜ್ಯದಲ್ಲಿರೋ ಬರೋಬ್ಬರಿ ೯೩೫೨ ಸೋಂಕಿತರ ಸೋಂಕಿನ ಮೂಲ ಇದುವರೆಗೂ ಪತ್ತೆಯಾಗಿಲ್ಲ.