ಜೂನ್ ತಿಂಗಳು ಆರಂಭವಾಗಿದೆ .. ಮಳೆಗಾಲನು ಶುರುವಾಗಿದೆ.ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿದ್ದು; ಮಳೆಬರುವ ಲಕ್ಷಣಗಳು ಕಾಣ್ತಾ ಇದೆ. ಇತ್ತ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ೫ ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾಹಿತಿ ಪ್ರಕಾರ ಮಂಗಳವಾರದಿಂದ ಜೂನ್ ೨೦ರವರೆಗೆ ಧಾರಾಕಾರ ಮಳೆ ಸುರಿಯುವ ಸೂಚನೆ ನೀಡಲಾಘೀರ್ಧಧೂ ಕರಾವಳಿಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.ಇನ್ನೊಂದೆಡೆ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಮೀನುಗಾರಿಕೆಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ೫ ದಿನದಲ್ಲಿ ಕರಾವಳಿಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ ಸುರಿಯಲಿದೆ.