
ವಿಶ್ವದ್ಯಾಂತ ಧಾರ್ಮಿಕ ಕ್ಷೇತ್ರಗಳು ಪುನರ್ ಆರಂಭವಾಗುತ್ತಿವೆ. ಕರೋನಾ ವೈರಸ್ ಸೋಂಕು ಹರಡುವ ಭೀತಿಯಿಂದ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದೀಗ ಎಲ್ಲ ಕೇಂದ್ರಗಳನ್ನು ದಿನಕಳದಂತೆ ಆರಂಭ ಮಾಡಲಾಗುತ್ತಿದೆ. ಈಗ ಸಿಖ್ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಕರ್ತಾರ್ಪುರ ಕಾರಿಡಾರ್‍ಅನ್ನು ಜೂ.29 ರಂದು ತೆರೆಯಲು ಸಿದ್ಧತೆ ನಡೆಯುತ್ತಿರುವುದಾಗಿ ಪಾಕಿಸ್ತಾನ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಮಹಾರಾಜ ರಂಜೀತ್ ಸಿಂಗ್ ಅವರ ಮರಣ ವರ್ಷಾಚರಣೆಯ ಅಂಗವಾಗಿ ಜೂ.29 ರಂದು ಎಲ್ಲಾ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ಪುರ ಸಾಹಿಬ್ ಕಾರಿಡಾರ್‍ನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಭಾರತಕ್ಕೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ.ಮಹಮ್ಮೂದ್ ಖುರೇಷಿ ಟ್ವೀಟರ್‍ನಲ್ಲಿ ಮಾಹಿತಿ ನೀಡಿದ್ದಾರೆ.
ಕೋವಿಡ್-19 ಸೋಂಕು ಹೆಚ್ಚಾಗುತ್ತಿದ್ದರಿಂದ ಮಾರ್ಚ್ 16 ರಿಂದ ಭಾರತ ಕರ್ತಾರ್ಪುರ ಕಾರಿಡಾರ್‍ಅನ್ನು ಬಂದ್ ಮಾಡಿತ್ತು. ಇದರಿಂದ ಪಾಕಿಸ್ತಾನ ಕೂಡ ಈ ಮಾರ್ಗವಾಗಿ ಯಾರು ಸಂಚರಿಸಂತೆ ನಿಷೇಧ ಹೇರಿತ್ತು. ಈಗ ಕರೋನಾ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿರುವುದರಿಂದ ಮಹಾರಾಜ ರಂಜೀತ್ ಸಿಂಗ್ ಅವರ ಮರಣ ವರ್ಷಾಚರಣೆಯ ಅಂಗವಾಗಿ ಕರ್ತಾರ್ಪುರ ಸಾಹಿಬ್ ಕಾರಿಡಾರ್ ತೆರಯಲು ಸಿದ್ಧತೆ ನಡೆಯುತ್ತಿದೆ.