ಕೊರೋನಾ ವೈರಸ್ ನಿಂದಾಗಿ ಎಲ್ಲಾ ಕಾರ್ಯಗಳು ಸ್ಧಗಿತ ಗೊಂಡಿದೆ. ಇದರಿಂದ ಬಡವರು ಶ್ರಮಿಕರು ಕುಗ್ಗಿ ಹೋಗಿದ್ದಾರೆ. ಬೇರೆ ರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರು ಲಾಕ್ಡೌನಿಂದ ಎಲ್ಲಿಗೆ ಹೋಗ ಬೇಕೆಂದು ದಿಕ್ಕು ತೋಚದಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ ಈಗ ಕೊರೋನಾ ಹೆಚ್ಚಾದರೂ ಸರ್ಕಾರದ ಅನ್ ಲಾಕ್ ನಿರ್ಧಾರದಿಂದ ಹೊರ ರಾಜ್ಯದಿಂದ ಬಂದವರರು ಸ್ವಲ್ಪ ಮಟ್ಟದ್ದ ರಿಲೀಫ್ ಕಂಡಿದ್ದಾರೆ. ಸೋಮವಾರ ಬೆಂಗಳೂರಿನಿಂದ ಹೊರ ರಾಜ್ಯಗಳಿಗೆ ಶ್ರಮಿಕ್ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಒಡಿಶಾ, ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯಗಳಿಗೆ ಹೋಗುವವರಿಗಾಗಿ ಇಂದು ಸರ್ಕಾರ ಶ್ರಮಿಕ್ ರೈಲನ್ನು ಹೊರಡಿಸಲು ನಿರ್ಧಾರಿಸಿದ್ದು ಇಂದು ಬೆಳ್ಳಗ್ಗೆ ಯಿಂದಲೇ ಅರಮನೆ ಮೈದಾನದಲ್ಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದರಾಗಿ ಬಂದ್ದಿದ್ದರು. ಮೈದಾನದಿಂದ ಪೋಲಿಸರು ಹಾಗು ಬಿಬಿಎಂಪಿ ಸಿಬ್ಬಂದಿಗಳು ಕಾರ್ಮಿಕರನ್ನು ರೈಲ್ವೇ ನಿಲ್ದಾಣಕ್ಕೆ ಕರೆ ತಂದಿದ್ದು. ಅರಮನೆ ಮೈದಾನಾದ ತ್ರಿಪುರ ಸುಂದರಿ ಗೇಟ್ ಬಳಿ ಕಾರ್ಮಿಕರಿಗೆ ಎಲ್ಲಾ ರೀತಿಯ ಟೆಸ್ಟ್ ಗಳನ್ನು ಮಾಡಿ ತಮ್ಮ ನೋಂದಣಿಯನ್ನು ಮಾಡಿಸಿಕೊಂಡಿದ್ದಾರೆ.