ಕೆಪಿ ಒಲಿ ಕುರ್ಚಿಗೆ ಕಂಟಕ: ಭಾರತದ ವಿರುದ್ಧ ಕಿಡಿ

ನೇಪಾಳದ ಪ್ರಧಾನ ಮಂತ್ರಿ ಕೆಪಿ ಶರ್ಮಾ ಒಲಿಯವರ ಸರ್ಕಾರದ ಸ್ಥಿತಿ ಸದ್ಯಕ್ಕೆ ಡೋಲಾಯಮಾನವಾಗಿದೆ. ಒಲಿ ನಾಯಕತ್ವದ ವಿರುದ್ಧ ಪುಷ್ಪ ಕಮಲ್ ದೊಹಲ್ ಅಲಿಯಾಸ್ ಪ್ರಚಂಡ ಬಂಡಾಯ ಸಾರಿದ್ದಾರೆ. ಪ್ರಚಂಡ ಬಂಡಾಯ ಒಲಿ ನಾಯಕತ್ವಕ್ಕೆ ಕುತ್ತು ತಂದಿದೆ.
ಭಾರತದ ವಿರುದ್ಧ ಎದೆಯುಬ್ಬಿಸಿ ನಿಂತ್ತಿದ್ದ ಪ್ರಧಾನಿ ಕೆಪಿ ಶರ್ಮಾ ಒಲಿ ಇಂದು ತಮ್ಮ ಅಧಿಕಾರ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಒಲಿಯವರ ಏಕಪಕ್ಷೀಯ ನಿರ್ಧಾರಗಳಿಂದಾಗಿ ದೇಶ ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂದು ದೊಹಲ್ ಆರೋಪಿಸಿದ್ದಾರೆ. ಹೀಗಾಗಿ ಯಾವುದೇ ವೇಳೆಯಲ್ಲದರೂ ಒಲಿ ನೇತೃತ್ವದ ಸರ್ಕಾರ ಪತನವಾಗುವ ಸಂಭವವಾಗುವ ಸಾಧ್ಯತೆ ಹೆಚ್ಚಾಗಿದೆ.
ಒಲಿ ಇದೀಗ ನೇಪಾಳದ ರಾಜಕೀಯ ಬೆಳವವಣಿಗೆಗಳಿಗೆ ಭಾರತವೇ ಕಾರಣ ಎಂದು ಭಾರತದತ್ತ ಬೊಟ್ಟು ಮಾಡಿ ತೋರಿಸುತ್ತಿದೆ. ಜತೆಗೆ ತಮ್ಮ ಸರ್ಕಾರದ ವಿರುದ್ಧ ನಡೆಯುತ್ತಿರುವ ಬಂಡಾಯಕ್ಕೆ ಭಾರತವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಗಡಿ ನಕ್ಷೆ ನವೀಕರಣ ಮಾಡಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಈ ಕಾರಣಕ್ಕೆ ತನ್ನ ಪದಚ್ಯುತಿ ಮಾಡಿ ಸರ್ಕಾರ ಉರುಳಿಸುವ ಷಡ್ಯಂತರವನ್ನು ಭಾರತ ಮಾಡುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

Latest News

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!